ಆಡ್ವಾಣಿ ಗುಜರಾತ್ ಭೇಟಿಗೆ ಅದ್ಧೂರಿ ಸಿದ್ಧತೆ
ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ ಗುಜರಾತ್ಗೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ಗುಜರಾತ್ನಲ್ಲಿ ಭರ್ಜರಿ ಸಿದ್ಧತೆಗಳು ನಡೆದು...
ಗಾಂಧಿನಗರ: ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ ಗುಜರಾತ್ಗೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ಗುಜರಾತ್ನಲ್ಲಿ ಭರ್ಜರಿ ಸಿದ್ಧತೆಗಳು ನಡೆದು ಬರುತ್ತಿವೆ. ಆಡ್ವಾಣಿ ಜತೆಗೆ ವೇದಿಕೆ ಹಂಚಿಕೊಳ್ಳಲಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಆಡ್ವಾಣಿಯವರ ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿಯೇ ನಡೆಸಲು ತೀರ್ಮಾನಿಸಿದ್ದಾರೆ.
ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದ ಆಡ್ವಾಣಿಯವರ ಗುಜರಾತ್ ಭೇಟಿ ಮಹತ್ವದ್ದು ಎಂದೇ ಹೇಳಲಾಗುತ್ತಿದೆ.
ಬಲ್ಲಮೂಲಗಳ ಪ್ರಕಾರ ಮೋದಿ, ಗುಜರಾತ್ಗೆ ಭೇಟಿ ನೀಡುವ ಆಡ್ವಾಣಿ ಅವರಿಗೆ ಕೆಂಪುಹಾಸಿನ ಸ್ವಾಗತ ನೀಡಬೇಕೆಂದು ರಾಜ್ಯ ಇಲಾಖೆಗೆ ಆದೇಶಿಸಿದ್ದಾರೆ.
ಅಹ್ಮದಾಬಾದ್ನ ಸೋಮನಾಥ್ ದೇವಾಲಯ ಟ್ರಸ್ಟ್ನಲ್ಲಿ ಆಡ್ವಾಣಿಯವರನ್ನು ಭೇಟಿ ಮಾಡಿರುವ ಮೋದಿ, ಗುಜರಾತ್ನಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಆಡ್ವಾಣಿ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಕಳೆದ ತಿಂಗಳು ಭೋಪಾಲದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ಮೋದಿ ಮತ್ತು ಆಡ್ವಾಣಿ ಇದೇ ಮೊದಲ ಬಾರಿಗೆ ಗುಜರಾತ್ನಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಇವರಿಬ್ಬರೂ ಸಬರ್ಮತಿ ನದೀ ದಡದಲ್ಲಿ ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನಿರ್ಮಿಸಿರುವ ವೃಂದಾವನವನ್ನು ಉದ್ಘಾಟಿಸಲಿದ್ದಾರೆ.