ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಉ.ಪ್ರ: ಕಾಂಗ್ರೆಸ್ ಬಗ್ಗೆ ವಿವಾದಿತ ಫಲಕಗಳ ತೆರವು

ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅನಾರೋಗ್ಯವಿದೆ ಆದ್ದರಿಂದ ಪ್ರಿಯಾಂಕಾ ಗಾಂಧಿ ಚುನಾವಣೆ ಸ್ಪರ್ಧಿಸಲಿ ಎಂದು...

Rashmi Kasaragodu
Updated On : 16 Oct 2013, 7:44 am

ಲಕ್ನೋ: ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅನಾರೋಗ್ಯವಿದೆ ಆದ್ದರಿಂದ ಪ್ರಿಯಾಂಕಾ ಗಾಂಧಿ ಚುನಾವಣೆ ಸ್ಪರ್ಧಿಸಲಿ ಎಂದು ವಿನಂತಿಸುವ ಫಲಕ ಫೂಲ್ಪುರ್ ವಿಧಾನ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದು, ಇದೀಗ ಅದನ್ನು ತೆರವುಗೊಳಿಸಲಾಗಿದೆ.

ಒಂದು ಕಾಲದಲ್ಲಿ ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರು ಪ್ರತಿನಿಧೀಕರಿಸಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರೇ ಈ ರೀತಿಯ ವಿವಾದಾತ್ಮಕ ಫಲಕ ಹಾಕುವ ಮೂಲಕ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ.

ಲಕ್ನೋದ ಸಿವಿಲ್ಲೈನ್ಸ್ ಪ್ರದೇಶದಲ್ಲಿ ಈ ಫಲಕ ಸ್ಥಾಪಿಸಿದ್ದು, ಮಂಗಳವಾರವೇ ಇದನ್ನು ತೆರವುಗೊಳಿಸಲಾಗಿದೆ.

ಸೋನಿಯಾ ಗಾಂಧಿ ಮೆಡಿಕಲ್ ಚೆಕಪ್ಗಾಗಿ ಆಗಾಗ ಅಮೆರಿಕಕ್ಕೆ ಹೋಗುತ್ತಿರುತ್ತಾರೆ. ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇತ್ತ ಪ್ರಿಯಾಂಕ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರೂ, ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳಿರುವುದನ್ನು ಫಲಕದಲ್ಲಿ ಉಲ್ಲೇಖಿಸಲಾಗಿದೆ.

ಪ್ರಸ್ತುತ ಫಲಕದಲ್ಲಿ ಹೀಗೆ ಬರೆಯಲಾಗಿದೆ " ತಾಯಿ ಈಗ ಅನಾರೋಗ್ಯದಿಂದಿದ್ದಾಳೆ, ಸಹೋದರನ ಹೆಗಲ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ. ಪ್ರಿಯಾಂಕಾ ನೀವು ಫೂಲ್ಪುರದಿಂದ ಸ್ಫರ್ಧಿಸಿ, ಪಕ್ಷದ ಪ್ರಚಾರ ಮಾಡಿ..ಕಾಂಗ್ರೆಸ್ನ್ನು ಮೂರನೇ ಬಾರಿಯೂ ಅಧಿಕಾರಕ್ಕೇರುವಂತೆ ಮಾಡಿ"

ಈ ರೀತಿ ವಿವಾದಾತ್ಮಕ ಫಲಕ ಸ್ಥಾಪಿಸಿದ್ದಕ್ಕಾಗಿ ಲಕ್ನೋ ಜಿಲ್ಲಾ ಕಾರ್ಯದರ್ಶಿ ಹಸೀಬ್ ಅಹ್ಮದ್ ಮತ್ತು ಪಕ್ಷದ ನಾಯಕ ಶ್ರೀಶ್ ಚಂದ್ರ ದುಬೆ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement