ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಲ್ಲಿದ್ದಲು ಹಗರಣ ಪ್ರಕರಣ: ಪ್ರಧಾನಿಯನ್ನು ಆರೋಪಿಯೆಂದು ಪರಿಗಣಿಸಿ

ಕಲ್ಲಿದ್ದಲು ಹಂಚಿಕೆ ಹಗರಣ ಪ್ರಕರಣದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನೂ ಆರೋಪಿಯೆಂದು ಪರಿಗಣಿಸಿ ಎಂದು ಕಲ್ಲಿದ್ದಲು ...

Rashmi Kasaragodu
Updated On : 16 Oct 2013, 3:53 am

ನವದೆಹಲಿ: ಕಲ್ಲಿದ್ದಲು ಹಂಚಿಕೆ ಹಗರಣ ಪ್ರಕರಣದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನೂ ಆರೋಪಿಯೆಂದು ಪರಿಗಣಿಸಿ ಎಂದು ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಪಿ.ಸಿ .ಪರಾಖ್ ಒತ್ತಾಯಿಸಿದ್ದಾರೆ. ಕಲ್ಲಿದ್ದಲು ಹಂಚಿಕೆ ಹಗರಣ ನಡೆದ ಸಂದರ್ಭದಲ್ಲಿ ಪ್ರಧಾನಿ ಸಿಂಗ್ ಅವರು ಕಲ್ಲಿದ್ದಲು ಇಲಾಖೆ ಅಧಿಕಾರ ವಹಿಸಿದ್ದರು. ಆದ್ದರಿಂದ ಅವರು ಕೂಡಾ ಈ ಪ್ರಕರಣದಲ್ಲಿ ಆರೋಪಿಯೇ ಎಂದು ಪರಾಖ್ ಹೇಳಿದ್ದಾರೆ.

ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ ಅವರ ವಿರುದ್ಧ ಸಿಬಿಐ ನಿನ್ನೆ ಎಫ್ ಐ ಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಪರಾಖ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ . ಎಂಟು ವರ್ಷಗಳ ಹಿಂದೆ ಕಲ್ಲಿದ್ದಲು ಘಟಕ ಹಂಚಿಕೆ ಯಲ್ಲಿ ಬಿರ್ಲಾ ಅವರು ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.

ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪರಾಖ್, ಕಲ್ಲಿದ್ದಲು ಘಟಕ ಹಂಚಿಕೆ ವಿಷಯದಲ್ಲಿ ನಾನು ಯಾವುದೇ ತಪ್ಪು ನಿರ್ಧಾರಗಳನ್ನು ಕೈಗೊಂಡಿಲ್ಲ. ನಾನು ಇಲ್ಲಿ ತಪ್ಪಿತಸ್ಥನಾಗಿದ್ದರೆ, ಇದರಲ್ಲಿ ಶಾಮೀಲಾದ ಎಲ್ಲರೂ ತಪ್ಪಿತಸ್ಥರೇ ಎಂದು ಹೇಳಿದ್ದಾರೆ.

ನನ್ನ ನಿರ್ಧಾರದಲ್ಲಿ ಯಾವುದೇ ತಪ್ಪುಗಳು ಇಲ್ಲ. ನಾವು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದೇವೆ. ಆದರೆ ಸಿಬಿಐ ಅಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳುತ್ತಿರುವುದು ಯಾಕೋ ಎಂದು ನಾ ಕಾಣೆ.

ಹಿಂಡಾಲ್ಕೋ ಕಂಪನಿಗೆ ಕಲ್ಲಿದ್ದಲು ಘಟಕ ಹಂಚಿದ್ದು ಪಿತೂರಿ ಎಂದು ಹೇಳುವುದಾದರೆ, ಹಂಚಿಕೆಗೆ ಸಮ್ಮತಿ ನೀಡಿದ ಪ್ರಧಾನಿಯವರನ್ನೂ ಆರೋಪಿ ಎಂದು ಪರಿಗಣಿಸಿ ಎಂದು ಪರಾಖ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement