ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಲ್ಲಿದ್ದಲು ಹಗರಣ: ಪ್ರಧಾನಿ ಉತ್ತರಿಸಲಿ

ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡ ತಪ್ಪಿತಸ್ಥರು, ಅವರನ್ನೂ ಆರೋಪಿಯೆಂದು ಪರಿಗಣಿಸಿ ...

Rashmi Kasaragodu
Updated On : 16 Oct 2013, 4:05 am

ನವದೆಹಲಿ: ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡ ತಪ್ಪಿತಸ್ಥರು, ಅವರನ್ನೂ ಆರೋಪಿಯೆಂದು ಪರಿಗಣಿಸಿ ಎಂದು ಹೇಳಿದ ಕಲ್ಲಿದ್ದಲು ಇಲಾಖೆ ಮಾಜಿ ಸಚಿವ ಪಿಸಿ ಪರಾಖ್ ಅವರಿಗೆ ಬಿಜೆಪಿ ಬೆಂಬಲವಾಗಿ ಕಣಕ್ಕಿಳಿದಿದೆ.

ಈ ಬಗ್ಗೆ ಬುಧವಾರ ಪ್ರತಿಕ್ರಿಯೆ ನೀಡಿದ ಬಿಜೆಪಿ ಪ್ರಧಾನಿ ಸಿಂಗ್ ಈ ಬಗ್ಗೆ ಮೌನ ಮುರಿಯಬೇಕೆಂದು ಒತ್ತಾಯಿಸಿದೆ.

ಪ್ರಧಾನಿ ಬಗ್ಗೆ ಪರಾಖ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಪ್ರಕಾಶ್ ಜವಡೇಕರ್, ಸಿಬಿಐ ನಿಷ್ಠಾವಂತ ಅಧಿಕಾರಿಯಾಗಿರುವ ಪಿ.ಸಿ. ಪರಾಖ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜವಡೇಕರ್, ಕಲ್ಲಿದ್ದಲು ಹಂಚಿಕೆ ಹರಾಜು ಪ್ರಕ್ರಿಯೆಯಲ್ಲಿ ಪರಾಖ್ ಅವರ ಸಲಹೆಯನ್ನು ಪ್ರಧಾನಿ ಅನುಸರಿಸಿದ್ದರೆ ಇಷ್ಟೊಂದು ಅವ್ಯವಹಾರಗಳು ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಪಿ.ಸಿ ಪರಾಖ್ ವಿರುದ್ಧ ಎಫ್ ಐ ಆರ್ ದಾಖಲಿಸಿರುವುದು ಪ್ರಜಾಪ್ರಭುತ್ವವನ್ನೇ ನಡುಗಿಸುವಂತದ್ದು. ಯಾವುದೇ ತಪ್ಪುಗಳಾಗಲಿ ಅದರ ಬಗ್ಗೆ ಪ್ರಜೆಗಳು ಖಂಡಿಸಬೇಕಾದ ಸಮಯ ಇದು ಎಂದು ಜವಡೇಕರ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement