ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಾನು ಪ್ರಾಮಾಣಿಕ: ಶ್ರೀನಿವಾಸನ್

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಬಗ್ಗೆ ಹಲವಾರು ಬಾರಿ ವಿಚಾರಣೆಗೊಳಗಾದ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್,...

Rashmi Kasaragodu
Updated On : 16 Oct 2013, 7:25 am

ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಬಗ್ಗೆ ಹಲವಾರು ಬಾರಿ ವಿಚಾರಣೆಗೊಳಗಾದ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್, ನಾನು ಪ್ರಾಮಾಣಿಕ ವ್ಯಕ್ತಿ, ಭಾರತೀಯ ಕ್ರಿಕೆಟ್‌ನಲ್ಲಿ ಭುಗಿಲೆದ್ದ ವಿವಾದದಲ್ಲಿ ನನ್ನನ್ನು ಅತಿಯಾಗಿ ಟೀಕೆಗೊಳಪಡಿಸಲಾಯಿತು ಎಂದು ಹೇಳಿದ್ದಾರೆ.

ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬಹುದು ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಈ ಬಗ್ಗೆ ಮಾತನಾಡಿದ ಅವರು, ನನ್ನನು ಮಾಧ್ಯಮಗಳು ವಿನಾಕಾರಣ ಟೀಕೆಗೊಳಪಡಿಸಿದವು ಎಂದಿದ್ದಾರೆ.

ನಾನು ಪ್ರಾಮಾಣಿಕ, ಅಪ್ಪಟ ಪ್ರಾಮಾಣಿಕ. ನನಗನಿಸಿದಂತೆ, ಕೆಲವು ತಿಂಗಳಲ್ಲಿ ನೀವು ನನ್ನ ಸ್ವಭಾವದ ಬಗ್ಗೆಯೂ ಅರಿತಿರಬಹುದು ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶ್ರೀನಿವಾಸನ್ ಹೇಳಿದ್ದಾರೆ.

ಐಪಿಎಲ್ ಬೆಟ್ಟಿಂಗ್ ನಡೆಸಿದ ಆರೋಪದಲ್ಲಿ ಶ್ರೀನಿವಾಸನ್ ಅವರ ಅಳಿಯ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಟೀಂ ಪ್ರಿನ್ಸಿಪಾಲ್ ಗುರುನಾಥ್ ಮೇಯಪ್ಪನ್ ಬಂಧಿತರಾದಾಗ, ಶ್ರೀನಿವಾಸನ್ ಅವರನ್ನೂ ವಿಚಾರಣೆಗೊಳಪಡಿಸಲಾಗಿತ್ತು.

ಈ ನಡುವೆ ಸುಪ್ರೀಂ ಕೋರ್ಟ್ ತೀರ್ಪು ಬಗ್ಗೆ ಏನಂತೀರಿ? ಎಂದು ಅವರನ್ನು ಕೇಳಿದಾಗ, ಖುಷಿಯಾಗಿದೆ. ಬಹಳ ಕಾಲದಿಂದ ನನ್ನನ್ನು ಬಲ್ಲ ಜನರಿಗೆ ಗೊತ್ತು ನಾನು ಏನು ಹೇಳುತ್ತಿದ್ದೇನೆ ಎಂದು. ನಾನು ಯಾವತ್ತೂ ಮುಂದೆ ಏನು ಮಾಡಬಹುದು ಎಂಬುದರ ಬಗ್ಗೆ ಮಾತ್ರ ಲಕ್ಷ್ಯಹೊಂದಿರುವ ವ್ಯಕ್ತಿ.

ನನಗೆ ಯಾರಲ್ಲೂ ಅಸೂಯೆ ಇಲ್ಲ, ನಾನು ಇರುವುದೇ ಹಾಗೆ. ತುಂಬಾ ವರುಷಗಳಿಂದ ಬಲ್ಲವರಿಗೆ ಈ ವಿಷಯಗಳು ಗೊತ್ತು. ನಾನು ಯಾವತ್ತೂ ಮುಂದೆ ಸಾಗುತ್ತಾ ಇರುತ್ತೇನೆ. ಇದೆಲ್ಲಾ ಆಯ್ತಲ್ವಾ, ಓಕೆ, ಸರಿ, ನಾನು ಖುಷಿಯಾಗಿದ್ದೇನೆ. ಮತ್ತೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ, ಮುಂದುವರಿಸುತ್ತೇನೆ ಎಂದು ಶ್ರೀನಿವಾಸನ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement