ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿ ಪ್ರಧಾನಿಯಾದರೆ ಖುಷಿ: ಆಡ್ವಾಣಿ

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾರತದ ಮುಂದಿನ ಪ್ರಧಾನ ಮಂತ್ರಿಯಾದರೆ ನನಗೆ ಖುಷಿಯಾಗುತ್ತದೆ ಎಂದು ಬಿಜೆಪಿ ಹಿರಿಯ...

Rashmi Kasaragodu
Updated On : 16 Oct 2013, 6:56 am

ಅಹ್ಮದಾಬಾದ್: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾರತದ ಮುಂದಿನ ಪ್ರಧಾನ ಮಂತ್ರಿಯಾದರೆ ನನಗೆ ಖುಷಿಯಾಗುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ ಹೇಳಿದ್ದಾರೆ. ಮೋದಿ ಅವರನ್ನು ಈ ರೀತಿ ಹೊಗಳುವ ಮೂಲಕ ಆಡ್ವಾಣಿ ಬಿಜೆಪಿಯೊಳಗೆ ಆಂತರಿಕ ಕಲಹವಿದೆ ಎಂಬ ಊಹಾಪೋಹಗಳಿಗೆ ತೆರೆಯೆಳೆದಿದ್ದಾರೆ.

ಬುಧವಾರ ಅಹ್ಮದಾಬಾದ್‌ನಲ್ಲಿ ಇನ್ಸಿಟ್ಯೂಟ್ ಆಫ್ ಇನ್‌ಫ್ರಾಸ್ಟ್ರಕ್ಚರ್, ರಿಸರ್ಚ್ ಆ್ಯಂಡ್ ಮ್ಯಾನೇಜ್‌ಮೆಂಟ್ (ಐಐಟಿ ಆರ್‌ಎಎಂ) ಉದ್ಘಾಟನೆ ವೇಳೆ ಮಾತನಾಡಿದ ಆಡ್ವಾಣಿ, ಮೋದಿ ಪ್ರಧಾನಿಯಾದರೆ ನಾನು ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ.

ಐಐಟಿ ಆರ್‌ಎಎಂನ್ನು ಗುಜರಾತ್‌ನಲ್ಲಿ ಸ್ಥಾಪಿಸುವ ಮೂಲಕ ಮೋದಿ ಒಳ್ಳೆ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಆಡ್ವಾಣಿ ಹೊಗಳಿದ್ದಾರೆ.

ಆದಾಗ್ಯೂ, ಪ್ರಧಾನಿ ಹುದ್ದೆ ಆಕಾಂಕ್ಷಿಯಾಗಿರುವ ಮೋದಿಗೆ ಆಡ್ವಾಣಿ ಸಾರ್ವಜನಿಕವಾಗಿ ಬೆಂಬಲ ಘೋಷಿಸಿರುವುದು ಇದೇ ಮೊದಲ ಬಾರಿಯಾಗಿದೆ.

ಗುಜರಾತ್‌ನಲ್ಲಿ ಮೋದಿ ಮಾಡಿದ ಕಾರ್ಯಗಳು ಜಗತ್ತಿನಾದ್ಯಂತ ಶ್ಲಾಘನೀಯವಾಗಿದೆ. ಮಾತ್ರವಲ್ಲದೆ ಮೋದಿ ಯಾವತ್ತೂ ಹೊಸ ಕಾರ್ಯಗಳನ್ನು ಮಾಡುತ್ತಿರುತ್ತಾರೆ ಎಂದಿದ್ದಾರೆ ಆಡ್ವಾಣಿ.

ಇದೇ ಮೊದಲ ಬಾರಿಗೆ ಆಡ್ವಾಣಿ ಮತ್ತು ಮೋದಿ ಗುಜರಾತ್‌ನಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement