ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಆರುಷಿ ಹತ್ಯೆಗೆ ಗಾಲ್ಫ್ ಕ್ಲಬ್, ಕತ್ತಿ ಬಳಸಲಾಗಿತ್ತು: ಸಿಬಿಐ

ಆರುಷಿ ತಲ್ವಾರ್ ಮತ್ತು ತಲ್ವಾರ್ ಕುಟುಂಬದ ಕೆಲಸದಾಳು ಹೇಮರಾಜ್‌ನ್ನು ಆರುಷಿಯ ಅಪ್ಪ ಅಮ್ಮನೇ ಕೊಲೆಗೈದಿದ್ದಾರೆ ...

Rashmi Kasaragodu
Updated On : 17 Oct 2013, 3:42 am

ಗಾಜಿಯಾಬಾದ್: ಆರುಷಿ ತಲ್ವಾರ್ ಮತ್ತು ತಲ್ವಾರ್ ಕುಟುಂಬದ ಕೆಲಸದಾಳು ಹೇಮರಾಜ್‌ನ್ನು ಆರುಷಿಯ ಅಪ್ಪ ಅಮ್ಮನೇ ಕೊಲೆಗೈದಿದ್ದಾರೆ ಎಂದು ಸಿಬಿಐ ಹೇಳಿದೆ.

ಗುರುವಾರ ವಿಶೇಷ ನ್ಯಾಯಾಲಯದಲ್ಲಿ ಆರುಷಿ-ಹೇಮರಾಜ್ ಅವಳಿ ಹತ್ಯೆಯ ಅಂತಿಮ ವಿಚಾರಣೆ ನಡೆದಿದ್ದು, ಆರುಷಿಯ ಹೆತ್ತವರಾದ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಈ ಹತ್ಯೆ ನಡೆಸಿದ್ದಾರೆ ಎಂದು ಸಿಬಿಐ ಹೇಳಿದೆ.

ದಂತವೈದ್ಯರಾಗಿರುವ ರಾಜೇಶ್ ಮತ್ತು ನೂಪುರ್ ತಲ್ವಾರ್ ಹತ್ಯಾ ಸ್ಥಳದಲ್ಲಿ ಸಾಕ್ಷ್ಯಗಳನ್ನು ನಾಶಪಡಿಸಿ ಆರುಷಿಯನ್ನು ಶವಪರೀಕ್ಷೆ ನಡೆಸಿದ ವೈದ್ಯರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದು ಅಕ್ಟೋಬರ್ 15ರಂದು ನಡೆದ ವಿಚಾರಣೆಯಲ್ಲಿ ಸಿಬಿಐ ವಾದಿಸಿದೆ.

2008ರಲ್ಲಿ ತಮ್ಮ ಮಗಳು ಆರುಷಿಯನ್ನು ಹತ್ಯೆಗೈದ ದಿನ ಈ ದಂಪತಿಗಳು ಎಚ್ಚರವಾಗಿಯೇ ಇದ್ದರು ಎಂಬುದಕ್ಕೆ ರಾತ್ರಿಯಿಡೀ ಮನೆಯ ಕಂಪ್ಯೂಟರ್‌ನಲ್ಲಿ ಇಂಟರ್ನೆಟ್ ಬಳಕೆ ಮಾಡಿರುವುದೇ ಸಾಕ್ಷಿ ಎಂದು ಸಿಬಿಐ ಪರ ವಾದಿಸಿದ ನ್ಯಾಯವಾದಿ ಆರ್.ಕೆ ಸೈನಿ ಹೇಳಿದ್ದಾರೆ.

2008 ಮೇ 16ರಂದು 14ರ ಹರೆಯದ ಆರುಷಿ ನೋಯ್ಡಾದಲ್ಲಿರುವ ತಮ್ಮ ಮನೆಯಲ್ಲಿ ಹತ್ಯೆಗೀಡಾಗಿದ್ದಳು. ಈ ಹತ್ಯೆ ನಡೆದ ಮರುದಿನ ಮನೆಯ ಕೆಲಸದಾಳು ಹೇಮರಾಜ್ ಅವರ ಶವ ಮನೆಯ ಮಹಡಿ ಮೇಲೆ ಪತ್ತೆಯಾಗಿತ್ತು.

ಆರುಷಿಯ ದೇಹದಲ್ಲಿರುವ ಸಾಕ್ಷ್ಯ ಮತ್ತು ಹತ್ಯಾಸ್ಥಳದಲ್ಲಿನ ಸಾಕ್ಷ್ಯಗಳು ನಾಶವಾಗಿದ್ದ ಕಾರಣ ತಲ್ವಾರ್ ದಂಪತಿಗಳೇ ಈ ಕೃತ್ಯವೆಸಗಿರಬಹುದು ಎಂಬ ಸಂಶಯ ಸಿಬಿಐಗೆ ಇತ್ತು.

ಮನೆಯ ಮೆಟ್ಟಿಲುಗಳಲ್ಲಿದ್ದ ರಕ್ತದ ಕಲೆಗಳು ಅರ್ಧ ಒರೆಸಿದ ರೀತಿಯಲ್ಲಿ ಪತ್ತೆಯಾಗಿರುವುದರಿಂದ ಈ ಅವಳಿ ಕೊಲೆ ತಲ್ವಾರ್ ದಂಪತಿಗಳೇ ನಡೆಸಿದ್ದಾರೆ ಎಂಬುದನ್ನು ತೋರಿಸುತ್ತದೆ.
ಆದಾಗ್ಯೂ, ಆರುಷಿಯನ್ನು ಶವಪರೀಕ್ಷೆ ಮಾಡಿದ ವೈದ್ಯರ ಮೇಲೆ ಪ್ರಭಾವ ಬೀರಲು ತಲ್ವಾರ್ ದಂಪತಿಗಳು ಯತ್ನಿಸಿದ್ದಾರೆ.

ಹತ್ಯಾ ಸ್ಥಳದಲ್ಲಿ ಸಿಕ್ಕ ವಿಸ್ಕಿ ಬಾಟಲಿಯಲ್ಲಿ ಸಿಕ್ಕಿದ ಬೆರಳಚ್ಚಿನಿಂದ ಆರುಷಿ ಹತ್ಯೆಯಲ್ಲಿ ತಲ್ವಾರ್ ದಂಪತಿಗಳು ಭಾಗಿಯಾಗಿದ್ದಾರೆ ಎಂಬುದು ಸಾಬೀತಾಗುತ್ತದೆ ಎಂದು ಸಿಬಿಐ ನ್ಯಾಯವಾದಿ ಹೇಳಿದ್ದಾರೆ.

ತಲ್ವಾರ್ ದಂಪತಿಗಳು ಆರುಷಿ ಹತ್ಯೆಗೆ ಗಾಲ್ಫ್ ಕ್ಲಬ್ ಮತ್ತು ಅಡುಗೆಮನೆಯಲ್ಲಿ ಬಳಸುವ ಕತ್ತಿ ಬಳಸಿದ್ದರು ಎಂದು ಸಿಬಿಐ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement