ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾನ್ಪುರ್: ಮೋದಿ ರ್ಯಾಲಿ ಸ್ಥಳಾಂತರಕ್ಕೆ ರೈತರ ಅರ್ಜಿ

ಶನಿವಾರ ಕಾನ್ಪುರದಲ್ಲಿ ನಡೆಯಲಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರ ರ್ಯಾಲಿಯನ್ನು ಸ್ಥಳಾಂತರ...

Rashmi Kasaragodu
Updated On : 17 Oct 2013, 6:38 am

ಅಲಹಾಬಾದ್: ಶನಿವಾರ ಕಾನ್ಪುರದಲ್ಲಿ ನಡೆಯಲಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರ ರ್ಯಾಲಿಯನ್ನು ಸ್ಥಳಾಂತರಗೊಳಿಸಬೇಕೆಂದು ಆಗ್ರಹಿಸಿ
 ಅಲ್ಲಿನ ದಲಿತ ರೈತರು ಅಲಹಾಬಾದ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಕೃಷಿಭೂಮಿಯಲ್ಲಿ ಮೋದಿ ರ್ಯಾಲಿ ನಡೆಸಲು ಉದ್ದೇಶಿಸಿದ್ದು, ಇದರಿಂದ ನಮ್ಮ ಬೆಳೆ ಹಾಳಾಗುತ್ತದೆ. ಮಾತ್ರವಲ್ಲದೆ ರ್ಯಾಲಿ ನಡೆಸಲು ಸ್ಥಳ ನಿಗದಿ ಪಡಿಸಿದ ಬಿಜೆಪಿ ಅಥವಾ ಜಿಲ್ಲಾಡಳಿತ ನಮ್ಮ ಭೂಮಿಯನ್ನು ಬಳಸಲು ನಮ್ಮ ಅನುಮತಿ ಕೋರಿಲ್ಲ ಎಂದು ರೈತರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಮೋದಿಯರ ರ್ಯಾಲಿಗಾಗಿ ಜಿಲ್ಲಾಡಳಿತ 167 ರೈತರ ಸುಮಾರು 3 ಎಕ್ರೆ ಭೂಮಿಯನ್ನು ಬಳಸಿಕೊಂಡಿದೆ.

ಪ್ರಧಾನಿ ಅಭ್ಯರ್ಥಿಯಾದ ನಂತರ ಮೋದಿ ಇದೇ ಮೊದಲ ಬಾರಿಗೆ ಇಂದಿರಾ ನಗರದಲ್ಲಿ ರ್ಯಾಲಿ ನಡೆಸುತ್ತಿದ್ದು, ಪ್ರಸ್ತುತ ರ್ಯಾಲಿಯನ್ನು ಭರ್ಜರಿಯಾಗಿ ನಡೆಸಲು ಉತ್ತರಪ್ರದೇಶ ಬಿಜೆಪಿ ತೀರ್ಮಾನಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement