ಮೇವು ಹಗರಣ: ಜಾರ್ಖಂಡ್ ಹೈಕೋರ್ಟ್ ಮೊರೆ ಹೋದ ಲಾಲೂ
ಮೇವು ಹಗರಣದಲ್ಲಿ ದೋಷಿ ಎಂದು ಸಿಬಿಐ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಬಿಹಾರದ ಮಾಜಿ ಮುಖ್ಯಮಂತ್ರಿ...
ರಾಂಚಿ: ಮೇವು ಹಗರಣದಲ್ಲಿ ದೋಷಿ ಎಂದು ಸಿಬಿಐ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಗುರುವಾರ ಜಾರ್ಖಂಡ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ತೀರ್ಪನ್ನು ಪ್ರಶ್ನಿಸಿ ನಾವು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವುದರ ಜತೆಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದೇವೆ ಎಂದು ಲಾಲೂ ಅವರ ನ್ಯಾಯವಾದಿ ಚಿತರಂಜನ್ ಹೇಳಿದ್ದಾರೆ.
ಮೇವು ಹಗರಣ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಲಾಲೂಗೆ ಸಿಬಿಐ ನ್ಯಾಯಾಲಯ ಅಕ್ಟೋಬರ್ 3ರಂದು 5 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ರಾಷ್ಟ್ರೀಯ ಜನತಾ ದಳದ ಸಂಸ್ಥಾಪಕರಾಗಿರುವ ಲಾಲೂ ಶಿಕ್ಷೆ ಪ್ರಕಟವಾದಾಗಲೂ ತಾನು ನಿರಪರಾಧಿಯೆಂದೇ ವಾದಿಸಿದ್ದರು. ದೋಷಿ ಎಂದು ಪರಿಗಣಿಸ್ಪಟ್ಟಿರುವ ಲಾಲೂಗೆ 25 ಲಕ್ಷ ರು ದಂಡವನ್ನೂ ವಿಧಿಸಲಾಗಿದೆ.
ಮೇವು ಹಗರಣದಲ್ಲಿ ಸಿಕ್ಕಿ ಹಾಕಿಕೊಂಡ ಲಾಲು 1997ರಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದರು. ಲಾಲೂ ನಂತರ ಅವರ ಪತ್ನಿ ರಾಬ್ರಿ ದೇವಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದರು.