ರಾಡಿಯಾ ಟೇಪ್ಸ್ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಆದೇಶ
ನೀರಾ ರಾಡಿಯಾ ಟೇಪ್ಸ್ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ...
ನವದೆಹಲಿ: ನೀರಾ ರಾಡಿಯಾ ಟೇಪ್ಸ್ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ.
ರಾಡಿಯಾ ಟೇಪ್ಸ್ನಲ್ಲಿರುವ ಸತ್ಯಾಸತ್ಯತೆಗಳನ್ನು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ನ ನ್ಯಾಯಪೀಠದ ನೇತೃತ್ವ ವಹಿಸಿರುವ ನ್ಯಾಯಾಧೀಶ ಜಿ.ಎಸ್ ಸಾಂಘ್ವಿ ಅವರು ಸಿಬಿಐಗೆ ಆದೇಶ ನೀಡಿದ್ದಾರೆ.
ಪ್ರಸ್ತುತ ತನಿಖೆಯ ವರದಿ ಸಲ್ಲಿಸಲು 2 ತಿಂಗಳುಗಳ ಕಾಲಾವಧಿ ನೀಡಿದ್ದು, ಡಿಸೆಂಬರ್ 16ರೊಳಗೆ ತನಿಖಾವರದಿ ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.
ಏನಿದು ರಾಡಿಯಾ ಟೇಪ್ಸ್ ?
2 ಜಿ ತರಂಗಾಂತರಂಗ ಹಂಚಿಕೆಯಲ್ಲಿ ನೀರಾ ರಾಡಿಯಾ, ವೃತ್ತಿಪರ ಲಾಬಿಗಾರರು, ರಾಜಕಾರಣಿಗಳು ಮತ್ತು ಪತ್ರಕರ್ತರ ನಡುವಿನ ದೂರವಾಣಿ ಸಂಭಾಷಣೆಯನ್ನು 2008-09ರಲ್ಲಿ ಭಾರತೀಯ ಆದಾಯ ತೆರಿಗೆ ಇಲಾಖೆಯು ಧ್ವನಿಮುದ್ರಣ ಮಾಡಿ ಬಿಡುಗಡೆ ಮಾಡಿರುವುದೇ ರಾಡಿಯಾ ಟೇಪ್ಸ್.