ಹಿಂಡಾಲ್ಕೋ ಕಂಪನಿ ಮೇಲೆ ಸಿಬಿಐ ದಾಳಿ: ರು. 25 ಕೋಟಿ ವಶ
ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿರುವ ಹಿಂಡಾಲ್ಕೋ ಇಂಡಸ್ಟ್ರೀಸ್ ಮೇಲೆ ಬುಧವಾರ ಸಿಬಿಐ ದಾಳಿ...
ನವದೆಹಲಿ: ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿರುವ ಹಿಂಡಾಲ್ಕೋ ಇಂಡಸ್ಟ್ರೀಸ್ ಮೇಲೆ ಬುಧವಾರ ಸಿಬಿಐ ದಾಳಿ ನಡೆಸಿ ವಶಪಡಿಸಿದ್ದ ನಗದನ್ನು ಆದಾಯ ತೆರಿಗೆ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.
ಸಿಬಿಐ ನಡೆಸಿದ ಈ ದಾಳಿಯಲ್ಲಿ ರು. 25 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತುತ ಕಂಪನಿಯಲ್ಲಿ ಇಷ್ಟೊಂದು ಹಣ ಎಲ್ಲಿಂದ ಬಂತು?ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದೀಗ ವಶ ಪಡಿಸಿರುವ ನಗದು ಹಣದ ಮೂಲ ಯಾವುದು ಎಂದು ತಿಳಿಯಲು ಹಿಂಡಾಲ್ಕೋ ದಾಖಲೆಗಳನ್ನು ತೋರಿಸಲಿ ಎಂದು ಐಟಿ ಇಲಾಖೆ ಮೂಲಗಳು ಹೇಳಿವೆ.
ನಿನ್ನೆ ಸಿಬಿಐ ಹಿಂಡಾಲ್ಕೋ ಕಂಪನಿ ಮೇಲೆ ದಾಳಿ ನಡೆಸಿ ರು.25 ಕೋಟಿ ನಗದು ವಶ ಪಡಿಸಿಕೊಂಡಿತ್ತು.
ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣದಲ್ಲಿ ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಪಿ.ಸಿ. ಪರಾಖ್, ಆದಿತ್ಯ ಬಿರ್ಲಾ ಗ್ರೂಪ್ ಚೇರ್‌ಮೆನ್ ಕುಮಾರ್ ಮಂಗಲಂ ಬಿರ್ಲಾ ಮತ್ತು ಹಿಂಡಾಲ್ಕೋ ಕಂಪನಿ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದ ಬೆನ್ನಲ್ಲೇ ದೆಹಲಿ, ಮುಂಬೈ, ಹೈದ್ರಾಬಾದ್ ಮತ್ತು ಭುಬನೇಶ್ವರದಲ್ಲಿ ಸಿಬಿಐ ದಾಳಿ ನಡೆಸಿತ್ತು.