ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಎಂವಿ ಸೀಮ್ಯಾನ್ ಗಾರ್ಡ್ ಓಹಿಯೋ ನೌಕಾ ಸಿಬ್ಬಂದಿಗಳ ಬಂಧನ

ತಮಿಳ್ನಾಡು ಕರಾವಳಿಯಲ್ಲಿ ಅನಧಿಕೃತವಾಗಿ ಪ್ರವೇಶಿಸಿ ಬಂಧನಕ್ಕೊಳಗಾಗಿರುವ ಅಮೆರಿಕ ಮೂಲದ ಎಂವಿ ಸೀಮ್ಯಾನ್ ...

Rashmi Kasaragodu
Updated On : 18 Oct 2013, 3:46 am

ಚೆನ್ನೈ/ಟ್ಯೂಟಿಕೋರಿನ್: ತಮಿಳ್ನಾಡು ಕರಾವಳಿಯಲ್ಲಿ ಅನಧಿಕೃತವಾಗಿ ಪ್ರವೇಶಿಸಿ ಬಂಧನಕ್ಕೊಳಗಾಗಿರುವ ಅಮೆರಿಕ ಮೂಲದ ಎಂವಿ ಸೀಮ್ಯಾನ್ ಗಾರ್ಡ್ ಓಹಿಯೋ ನೌಕೆಯಲ್ಲಿದ್ದ 35  ನೌಕಾ ಸಿಬ್ಬಂದಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಈ ಸಿಬ್ಬಂದಿಗಳನ್ನು ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಿದೆ.

ಟ್ಯೂಟಿಕಾರಿನ್‌ನಲ್ಲಿ ವಶ ಪಡಿಸಿಕೊಳಲಾದ ಅಮೆರಿಕನ್ ನೌಕೆಯಲ್ಲಿದ್ದ 35 ಮಂದಿಯನ್ನು ಮುತಾಯ್‌ಪುರಂ ಪೊಲೀಸರು ಶುಕ್ರವಾರ ಬೆಳಗ್ಗೆ ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧನಕ್ಕೆ ಮುನ್ನ ಎಲ್ಲ ಸಿಬ್ಬಂದಿಗಳನ್ನು ಸರ್ಕಾರಿ ವೈದ್ಯರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಅದೇ ವೇಳೆ ನೌಕೆಯಲ್ಲಿದ್ದ ಬ್ರಿಟನ್ ಪೌರರನ್ನು ತಮಗೆ ಬಿಟ್ಟುಕೊಡಬೇಕೆಂದು ಬ್ರಿಟನ್ ಸರ್ಕಾರ ಒತ್ತಾಯಿಸಿದೆ.

ಏತನ್ಮಧ್ಯೆ, ತಮಿಳ್ನಾಡಿನ ವಿಶೇಷ ತನಿಖಾ ತಂಡವಾದ 'ಕ್ಯೂ' ಬ್ರಾಂಚ್ ಪ್ರಸ್ತುತ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳನ್ನು ಬಹಿರಂಗ ಪಡಿಸಲು ನಿರಾಕರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement