ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಗುಜರಾತ್ ಮಾದರಿ' ಅಭಿವೃದ್ಧಿ ಬಗ್ಗೆ ಮೋದಿಗೆ ಸವಾಲೆಸೆದ ದಿಗ್ವಿಜಯ್

'ಗುಜರಾತ್ ಮಾದರಿ' ಅಭಿವೃದ್ಧಿ ಬಗ್ಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್...

Rashmi Kasaragodu
Updated On : 18 Oct 2013, 4:18 am

ನವದೆಹಲಿ: 'ಗುಜರಾತ್ ಮಾದರಿ' ಅಭಿವೃದ್ಧಿ ಬಗ್ಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಸವಾಲೆಸೆದಿದ್ದಾರೆ. ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ದಿಗ್ವಿಜಯ್ ಸಿಂಗ್ ದೇಶದಲ್ಲಿ ಗುಜರಾತ್ ಅತೀ ಹೆಚ್ಚು ಸಾಲಹೊಂದಿದೆ ಎಂದು ಹೇಳಿದ್ದಾರೆ.

ಗುಜರಾತ್ ಸರ್ಕಾರ ಅತೀ ಹೆಚ್ಚು ಸಾಲವನ್ನು ಹೊಂದಿದೆ. ಇದರರ್ಥ ಗುಜರಾತ್ನಲ್ಲಿರುವ ಪ್ರತಿಯೊಬ್ಬ ಪ್ರಜೆಯೂ ಇನ್ನಿತರ ರಾಜ್ಯಗಳಲ್ಲಿರುವ ಪ್ರಜೆಗಳಿಗಿಂತ ಹೆಚ್ಚಿನ ಸಾಲ ಪಾವತಿ ಮಾಡಬೇಕಾಗಿದೆ ಎಂದು ದಿಗ್ವಿಜಯ್ ಹೇಳಿದ್ದಾರೆ.

ಈ ಬಗ್ಗೆ ಮೋದಿ ಬೆಂಬಲಿಗರು ಏನಂತಾರೆ? ಎಂದು ಅವರು ಪ್ರಶ್ನಿಸಿದ್ದಾರೆ.

ಹೌದು, ಈ ಬಗ್ಗೆ ಅವರು (ಬಿಜೆಪಿ) ನಮ್ಮನ್ನು ಬೈದುಕೊಳ್ಳಬಹುದು. ಪರ್ವಾಗಿಲ್ಲ. ಗುಜರಾತ್ ಅಭಿವೃದ್ಧಿ ಸಾರ್ವಜನಿಕರಿಂದಲೇ ಆಗಿದ್ದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಯೋಜನಾ ಆಯೋಗದ ಅಂಕಿ ಅಂಶದ ಪ್ರಕಾರ ಗುಜರಾತ್ನ ಒಟ್ಟು ಉತ್ಪನ್ನದಲ್ಲಿ 25.20 ಶೇ. ಗುಜರಾತ್ನ ಬಾಧ್ಯತೆ ಇದೆ. ಇನ್ನಿತರ ರಾಜ್ಯಗಳಲ್ಲಿ ಇದು 24.13 ಶೇ ಆಗಿದೆ ಎಂದು ಸಿಂಗ್ ಹೇಳಿದ್ದಾರೆ.

ಅದೇ ವೇಳೆ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವ ಟಾಪ್ 5 ರಾಜ್ಯಗಳಲ್ಲಿ ಗುಜರಾತ್ ಹೆಸರು ಇಲ್ಲ. ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವ 7 ರಾಜ್ಯಗಳ ಪೈಕಿ 5 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಆದರೂ ಜನರು ಗುಜರಾತ್ ಮಾದರಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ದಿಗ್ವಿಜಯ್ ಟ್ವೀಟಿಸಿದ್ದಾರೆ.

ದಿಗ್ವಿಜಯ್ ಟೀಕೆಗೆ ಪ್ರತ್ಯುತ್ತರ ನೀಡಿದ ಭಾರತೀಯ ಜನತಾ ಪಕ್ಷದ ನೇತಾರ ಪ್ರಕಾಶ್ ಜವಡೇಕರ್ ಒಂದು ವೇಳೆ ಗುಜರಾತ್ ಸಾಲ ಮಾಡಿಕೊಂಡಿದ್ದರೆ ಅದು ಅಭಿವೃದ್ಧಿಗೋಸ್ಕರ. ಇದರ ಬಗ್ಗೆ ನಮ್ಮಲ್ಲಿ ಸಾಕ್ಷ್ಯಗಳಿವೆ ಎಂದು ಹೇಳಿದ್ದಾರೆ.

ಸಾಲ ಪಡೆದುಕೊಂಡರೂ ನಿಮ್ಮ ರಾಜ್ಯದಲ್ಲಿ ನೀವು ಎಷ್ಟು ಅಭಿವೃದ್ಧಿ ಮಾಡಿದ್ದೀರಿ? . ಗುಜರಾತ್ನಲ್ಲಿ ನೀರಿದೆ. ರೈತರಿಗೆ ಅನುಕೂಲವಾಗಲೆಂದು ನೀರಿನ ಟ್ಯಾಂಕ್ಗಳನ್ನು ನಿರ್ಮಿಸಲಾಗಿದೆ. ಈ ಬಗ್ಗೆಯೂ ಹೋಲಿಕೆ ಮಾಡಿ ಎಂದು ಜವಡೇಕರ್ ದಿಗ್ವಿಜಯ್ ಟೀಕೆಗೆ ಉತ್ತರಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement