ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಿಧಿ ಶೋಧ: ಪಿಐಎಲ್ ವಿಚಾರಣೆಗೆ ಸುಪ್ರೀಂ ಅಸ್ತು

ಉತ್ತರ ಪ್ರದೇಶದಲ್ಲಿ 1 ಸಾವಿರ ಟನ್ ಬಂಗಾರದ ಬಗ್ಗೆ ಶೋಧ ಕಾರ್ಯಾಚರಣೆ ಸಂಬಂಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ...

Mainashree
Updated On : 18 Oct 2013, 1:32 am

ನವದೆಹಲಿ:  ಉತ್ತರ ಪ್ರದೇಶದಲ್ಲಿ 1 ಸಾವಿರ ಟನ್ ಬಂಗಾರದ ಬಗ್ಗೆ ಶೋಧ ಕಾರ್ಯಾಚರಣೆ ಸಂಬಂಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿಸಿದೆ.

ಉತ್ತರಪ್ರದೇಶದ ಉನ್ನಾವ್ ಜಿಲ್ಲೆಯ ದೌಡಿಯಾ-ಖೇರಾ ಗ್ರಾಮದಲ್ಲಿರುವ ಜಮೀನ್ದಾರನೊಬ್ಬನ ಪಾಳುಬಿದ್ದ ಮನೆಯ ಕೆಳಗೆ ಇರಬಹುದು ಎನ್ನಲಾಗಿರುವ 1 ಸಾವಿರ ಟನ್ ಬಂಗಾರದ ಬಗ್ಗೆ ಭಾರತೀಯ ಪುರಾತತ್ವ ಇಲಾಖೆ ನೇತೃತ್ವದಲ್ಲಿ ಶೋಧ ಕಾರ್ಯಚರಣೆ ಕೈಗೊಳ್ಳಲು ಮುಂದಾಗಿತ್ತು.

ಈ ಸಂಬಂಧ ವಕೀಲರಾದ ಎಂ.ಎಲ್. ಶರ್ಮಾ ಅವರು ಶೋಧ ಕಾರ್ಯಚರಣೆ ನಡೆಸುವ ವೇಳೆ ದೊರೆಯುವಂತಹ ವಸ್ತುಗಳು ಅದೃಶ್ಯವಾಗುವ ಸಾಧ್ಯತೆ ಹೆಚ್ಚಾಗಿದ್ದು, ಈ ಸಂಬಂಧ ಮುಂಜಾಗ್ರತೆ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಸುಪ್ರೀಂ ನಿರ್ದೇಶಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಮುಖ್ಯನ್ಯಾಯಾಮೂರ್ತಿ ಪಿ. ಸತಾಶಿವಂ ಅವರು ಅರ್ಜಿ ವಿಚಾರಣೆ ನಡೆಸಲು ಸಮ್ಮತಿ ಸೂಚಿಸಿದ್ದಾರೆ. ಆದರೆ ಈ ವಾರ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಅರ್ಜಿ ವಿಚಾರಣೆಯನ್ನು ಮುಂದಿನ ವಾರ ನಡೆಸಲಾಗುವುದು ಎಂದು ಹೇಳಿದ್ದಾರೆ.

ವಕೀಲರು ತ್ವರಿತ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಇದನ್ನು ತಿರಸ್ಕರಿಸಿದೆ. ಮುಂದಿನ ವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ ಎಂದು ಮೂಲಗಳು ತಿಳಿಸಿವೆ.

ಶೋಭನ್ ಸರ್ಕಾರ್ ಎಂಬ ಸಾಧುವೊಬ್ಬರು ಈ ಪ್ರದೇಶದಲ್ಲಿ 1 ಸಾವಿರ ಟನ್ ಚಿನ್ನ ಹುದುಗಿರಿಸಲಾಗಿದೆ. ಈ ವಿಚಾರ ತಮಗೆ ಕನಸಿನಲ್ಲಿ ಕಂಡಿತ್ತು ಎಂದು ಅವರು ಹೇಳಿಕೊಂಡಿದ್ದರು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೇರವಾಗಿ ಪತ್ರ ಬರೆದಿದ್ದರು.

ಭಾರತೀಯ ಪುರಾತತ್ವ ಇಲಾಖೆ ಮತ್ತು ಇತರ ಇಲಾಖೆಗಳ ಹಿರಿಯ ಅಧಿಕಾರಿಗಳು, ಇಂದು ನೆಲ ಅಗೆಯುವ ಕಾರ್ಯವನ್ನು ಪ್ರಾರಂಭಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement