ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿ ಕಾನ್ಪುರ್ ರ್ಯಾಲಿಗೆ ಹಸಿರು ನಿಶಾನೆ

ಶನಿವಾರ ಕಾನ್ಪುರದಲ್ಲಿ ನಡೆಯಬೇಕಾಗಿದ್ದ ಮೋದಿ ಅವರ ರ್ಯಾಲಿ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿ ಅಲ್ಲಿನ ರೈತರು ಸಲ್ಲಿಸಿದ್ದ...

Rashmi Kasaragodu
Updated On : 18 Oct 2013, 6:52 am

ಅಲಹಾಬಾದ್: ಶನಿವಾರ ಕಾನ್ಪುರದಲ್ಲಿ ನಡೆಯಬೇಕಾಗಿದ್ದ ಮೋದಿ ಅವರ ರ್ಯಾಲಿ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿ ಅಲ್ಲಿನ ರೈತರು ಸಲ್ಲಿಸಿದ್ದ ಅರ್ಜಿಯನ್ನು ಉತ್ತರಪ್ರದೇಶ ಹೈಕೋರ್ಟ್ ತಳ್ಳಿ ಹಾಕಿದೆ.

ಅರ್ಜಿ ತಿರಸ್ಕೃತಗೊಂಡಿರುವುದರಿಂದ ಈ ಮೊದಲೇ ನಿಗದಿ ಪಡಿಸಿದಂತೆ ಮೋದಿ ರ್ಯಾಲಿ ನಿಗದಿತ ಸ್ಥಳದಲ್ಲೇ ನಡೆಯಲಿದೆ.

ಮೋದಿ ರ್ಯಾಲಿಗಾಗಿ ತಮ್ಮ ಕೃಷಿ ಭೂಮಿಯನ್ನು ಬಳಸುತ್ತಿದ್ದು, ಇದರಿಂದ ನಮ್ಮ ಕೃಷಿಗೆ ಹಾನಿಯಾಗಿದೆ. ಆದ್ದರಿಂದ ಮೋದಿ ರ್ಯಾಲಿಯನ್ನು ಸ್ಥಳಾಂತರಗೊಳಿಸಬೇಕೆಂದು ಒತ್ತಾಯಿಸಿ ಅಲ್ಲಿನ ರೈತರು ಉತ್ತರ ಪ್ರದೇಶ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅದೇ ವೇಳೆ ಜಿಲ್ಲಾಡಳಿತ ತಮ್ಮ ಭೂಮಿಯನ್ನು ಬಳಸಿಕೊಳ್ಳುವಾಗ ನಮ್ಮ ಅನುಮತಿಯನ್ನು ಪಡೆದುಕೊಂಡಿರಲಿಲ್ಲ ಎಂದು ರೈತರು ದೂರಿದ್ದರು.

ನಾಳೆ ಮಧ್ಯಾಹ್ನ 1 ಗಂಟೆಗೆ ಮೋದಿ ರ್ಯಾಲಿ ಸ್ಥಳವಾದ ಇಂದಿರಾ ನಗರಕ್ಕೆ ತಲುಪಲಿದ್ದಾರೆ. ಮೋದಿಯವರ ಈ ರ್ಯಾಲಿಯನ್ನು ಯಶಸ್ವಿಯನ್ನಾಗಿ ಮಾಡಲು ಉತ್ತರಪ್ರದೇಶ ಬಿಜೆಪಿ ಘಟಕ ಭಾರೀ ಸಿದ್ಧತೆ ನಡೆಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement