ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಲ್ಲಿದ್ದಲು ಹಗರಣ: ಹಿಂಡಾಲ್ಕೋ ಬೆಂಬಲಕ್ಕೆ ನಿಂತ ಪ್ರಧಾನಿ ಕಚೇರಿ

ಖ್ಯಾತ ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ ಅವರ ಹಿಂಡಾಲ್ಕೋ ಕಂಪನಿಗೆ ಕಲ್ಲಿದ್ದಲು ಘಟಕ ಹಂಚಿಕೆ ಮಾಡಿರುವ ಬಗ್ಗೆ ಪ್ರಧಾನಿ ಕಚೇರಿ...

Rashmi Kasaragodu
Updated On : 19 Oct 2013, 6:55 am

ನವದೆಹಲಿ: ಖ್ಯಾತ ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ ಅವರ ಹಿಂಡಾಲ್ಕೋ ಕಂಪನಿಗೆ ಕಲ್ಲಿದ್ದಲು ಘಟಕ ಹಂಚಿಕೆ ಮಾಡಿರುವ ಬಗ್ಗೆ ಪ್ರಧಾನಿ ಕಚೇರಿ ಶನಿವಾರ ದಾಖಲೆಗಳನ್ನೊದಗಿಸಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಧಾನಿ ಕಚೇರಿಯ ವಕ್ತಾರರು  ಹಿಂಡಾಲ್ಕೋ ಕಂಪಿನಿಗೆ ಕಲ್ಲಿದ್ದಲು ಘಟಕ ನೀಡುವ ನಿರ್ಧಾರ ಸರಿಯಾದುದೇ ಆಗಿದೆ ಎಂದು ಹೇಳಿದ್ದಾರೆ.

ಹಿಂಡಾಲ್ಕೋ ಕಂಪನಿಗೆ ಕಲ್ಲಿದ್ದಲು ಘಟಕ ನೀಡುವ ಬಗ್ಗೆ ಪ್ರಧಾನಿ ಸರಿಯಾದ ನಿರ್ಧಾರವನ್ನೇ ಕೈಗೊಂಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧಾರವನ್ನು ಪಾಲಿಸಬೇಕಾಗಿದೆ ಎಂದು ವಕ್ತಾರರು ಹೇಳಿದ್ದಾರೆ.

ಅದೇ ವೇಳೆ ಕಲ್ಲಿದ್ದಲು ಘಟಕ ಹಂಚಿಕೆಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶಿಫಾರಸು ಮಾಡಿದ್ದರು ಎಂದು ಪ್ರಧಾನಿ ಕಚೇರಿ ಹೇಳಿದೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂಡಾಲ್ಕೋ ಕಂಪನಿ ಮುಖ್ಯಸ್ಥ ಕುಮಾರ್ ಮಂಗಲಂ ಬಿರ್ಲಾ, ತಮ್ಮ ಕಂಪನಿ ಯಾವುದೇ ತಪ್ಪು ಮಾಡಿಲ್ಲ ಆದ್ದರಿಂದ ಸಿಬಿಐ ಎಫ್‌ಐಆರ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement