4ನೇ ಏಕದಿನ ಪಂದ್ಯ: ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಇಲ್ಲ
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸೋತಿದ್ದ ಭಾರತದ ಕ್ರಿಕೆಟ್ ತಂಡದಲ್ಲಿ ಮುಂದಿನ ಪಂದ್ಯಗಳನ್ನಾಡಲು ಯಾವುದೇ...
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸೋತಿದ್ದ ಭಾರತದ ಕ್ರಿಕೆಟ್ ತಂಡದಲ್ಲಿ ಮುಂದಿನ ಪಂದ್ಯಗಳನ್ನಾಡಲು ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಆಯ್ಕೆಗಾರರು ಭಾನುವಾರ ಹೇಳಿದ್ದಾರೆ.
ಬಿಸಿಸಿಐಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಸುದ್ದಿ ಪ್ರಕಟವಾಗಿದೆ.
ಏಳು ಪಂದ್ಯಗಳಿರುವ ಸರಣಿಯಲ್ಲಿ ಕಳಪೆ ಬೌಲಿಂಗ್ನಿಂದಾಗಿ ಭಾರತ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರು ಪಂದ್ಯಗಳಲ್ಲಿ ಎರಡು ಪಂದ್ಯ ಗಳನ್ನು ಸೋತಿತ್ತು.
ಶನಿವಾರ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಗೆಲ್ಲುವ ನಿರೀಕ್ಷೆಯಿದ್ದರೂ, ಕೊನೆಯ ಓವರ್ನಲ್ಲಿ ಇಶಾಂತ್ ಶರ್ಮ 30 ರನ್ಗಳನ್ನು ಕೊಟ್ಟ ಕಾರಣ ಆಸ್ಟ್ರೇಲಿಯಾ ಸುಲಭ ಜಯ ಸಾಧಿಸಿತ್ತು.
ಭಾರತದ 304 ರನ್ಗಳ ಬೆನ್ನು ಹತ್ತಿ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾದ ಗೆಲುವಿಗೆ 18 ಬಾಲ್ಗಳಲ್ಲಿ 44 ರನ್ಗಳ ಅಗತ್ಯವಿತ್ತು. ಆದರೆ 48ನೇ ಓವರ್ನಲ್ಲಿ ಬೌಲಿಂಗ್ ಮಾಡಿದ ಇಶಾಂತ್ ಶರ್ಮಾ 30 ರನ್ಗಳನ್ನು ನೀಡಿದ್ದು, ಆಸ್ಟ್ರೇಲಿಯಾ ಪಾಲಿಗೆ ಇದು ವರವಾಯಿತು.
ಪಂದ್ಯ ಸೋತ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಧೋನಿ ಬೌಲರ್ಗಳ ವಿರುದ್ಧ ಗರಂ ಆಗಿದ್ದರು. ಆದ್ದರಿಂದ ಮುಂದಿನ ಪಂದ್ಯಗಳಿಗೆ ಟೀಂನಲ್ಲಿ ಕೆಲವರನ್ನು ಕೈ ಬಿಡಲಾಗುವುದು ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಇದೀಗ ಮುಂದಿನ ಎಲ್ಲ ಪಂದ್ಯಗಳಿಗಾಗಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಬಿಸಿಸಿಐ ಹೇಳಿದೆ.
ನಾಲ್ಕನೇ ಏಕದಿನ ಪಂದ್ಯಕ್ಕಿರುವ ಟೀಂ ಇಂಡಿಯಾ ಸದಸ್ಯರು
ಎಂ.ಎಸ್ ಧೋನಿ (ನಾಯಕ), ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಅಶ್ವಿನ್, ಭುವಿ, ಇಶಾಂತ್ ಶರ್ಮಾ, ವಿನಯ್, ಮಿಶ್ರಾ, ರಾಯ್ಡು, ಶಮಿ, ಉನಾದ್ಕತ್.
ನಾಲ್ಕನೇ ಏಕದಿನ ಪಂದ್ಯ ಬುಧವಾರ ರಾಂಚಿಯ ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.