ಕನಸಿನ ಚಿನ್ನ: ಉನ್ನಾವೋದ ಇನ್ನೆರಡು ಕಡೆ ಚಿನ್ನವಿದೆಯಂತೆ
ಸಾಧುವಿನ ಕನಸಿನ ಪ್ರಕಾರ ಉತ್ತರ ಪ್ರದೇಶದ ಉನ್ನೋವೋ ಕೋಟೆಯಡಿಯಲ್ಲಿರುವ 1,000 ಟನ್ ಚಿನ್ನಕ್ಕಾಗಿ ಉತ್ಖನನ...
ಉನ್ನಾವೋ: ಸಾಧುವಿನ ಕನಸಿನ ಪ್ರಕಾರ ಉತ್ತರ ಪ್ರದೇಶದ ಉನ್ನೋವೋ ಕೋಟೆಯಡಿಯಲ್ಲಿರುವ 1,000 ಟನ್ ಚಿನ್ನಕ್ಕಾಗಿ ಉತ್ಖನನ ಮುಂದುವರಿದಿದ್ದು, ಇದೀಗ ಇನ್ನೂ ಎರಡು ಕಡೆ ಇದೇ ರೀತಿ ನಿಧಿ ಇದೆ ಎಂದು ಭಾರತೀಯ ಪುರಾತತ್ವ ಇಲಾಖೆ ಹೇಳಿದೆ.
ಭಾರತೀಯ ಪುರಾತತ್ವ ಇಲಾಖೆ ಹೇಳಿರುವ ಈ ಪ್ರದೇಶಗಳಲ್ಲಿ ಶೀಘ್ರವೇ ಉತ್ಖನನ ಕಾರ್ಯ ಆರಂಭಿಸಲಾಗುವುದು ಎಂದು ಪ್ರಸ್ತುತ ಇಲಾಖೆ ಹೇಳಿದೆ.
ಉನ್ನೋವೋದಲ್ಲಿರುವ 19ನೇ ಶತಮಾನದ ಪುರಾತನ ಕೋಟೆಯಲ್ಲಿ 1000 ಟನ್ ಚಿನ್ನಕ್ಕಾಗಿ ಉತ್ಖನನ ಕಾರ್ಯ ಮೂರನೇ ದಿನವಾದ ಭಾನುವಾರವೂ ಮುಂದುವರಿದಿದೆ. ಅದೇ ವೇಳೆ ಸಾಧು ಶೋಭನ್ ಸರ್ಕಾರ್ ಫತೇಪುರ್ ಜಿಲ್ಲೆಯ ಅದಾಂಪುರ್ ಗ್ರಾಮದಲ್ಲಿ 2,500 ಟನ್ ಚಿನ್ನ ಇದೆ ಎಂಬ ಮತ್ತೊಂದು ಕನಸು ಬಿದ್ದಿರುವುದಾಗಿ ಹೇಳಿದ್ದಾರೆ. ಮಾತ್ರವಲ್ಲದೆ ತಮ್ಮ ಕನಸಿನ ಬಗ್ಗೆ ಜಿಲ್ಲಾ ಮೆಜಿಸ್ಟ್ರೇಟ್‌ಗೂ ಪತ್ರ ಬರೆದು ತಿಳಿಸಿದ್ದಾರೆ.
ಇದೀಗ ಉನ್ನವೋದಲ್ಲಿ ಉತ್ಖನನ ಕಾರ್ಯ ಮುಂದುವರಿದಿದ್ದರೂ ಈವರೆಗೆ ಯಾವುದೇ ಲೋಹ ಪತ್ತೆಯಾಗಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ಹೇಳಿದೆ.