ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಲ್ಲಿದ್ದಲು ಹಗರಣ: ಪ್ರಧಾನಿ ಕಚೇರಿ ಬೆಂಬಲಕ್ಕೆ ನಿಂತ ಖುರ್ಷಿದ್

ಹಿಂಡಾಲ್ಕೋ ಕಂಪನಿಗೆ ಕಲ್ಲಿದ್ದಲು ಘಟಕ ಹಂಚಿಕೆ ಮಾಡಿರುವುದರಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ ಎಂದು ಪ್ರಧಾನಿ ಕಚೇರಿ ...

Rashmi Kasaragodu
Updated On : 20 Oct 2013, 1:59 am

ನವದೆಹಲಿ: ಹಿಂಡಾಲ್ಕೋ ಕಂಪನಿಗೆ ಕಲ್ಲಿದ್ದಲು ಘಟಕ ಹಂಚಿಕೆ ಮಾಡಿರುವುದರಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ ಎಂದು ಪ್ರಧಾನಿ ಕಚೇರಿ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಇದೀಗ ವಿದೇಶಾಂಗ ವ್ಯವಹಾರ ಸಚಿವ ಸಲ್ಮಾನ್ ಖುರ್ಷಿದ್ ಪ್ರಧಾನಿ ಮನಮೋಹನ್ ಸಿಂಗ್ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಪ್ರಧಾನಿ ಕಚೇರಿಗೆ ಬರುವ ಫೈಲ್‌ಗಳನ್ನು ಕಚೇರಿಯಲ್ಲಿರುವವರು ಪರಿಶೀಲನೆಗೊಳಪಡಿಸಿ ಅದನ್ನು ಪ್ರಧಾನಿಯವರಿಗೆ ಕಳುಹಿಸಿಕೊಡುತ್ತಾರೆ. ಪ್ರಧಾನಿ ಆ ಫೈಲ್‌ಗೆ ಸಹಿ ಹಾಕುವ ಮುನ್ನ ಅದರ ಪ್ರತೀ ಪುಟವನ್ನೂ ಓದಬೇಕು ಎಂದು ನೀವು ನಿರೀಕ್ಷಿಸುತ್ತಿದ್ದೀರಾ? ನಾನೂ ಒಬ್ಬ ಸಚಿವ. ಈ ರೀತಿ ಕೆಲಸ ಮಾಡಿದರೆ ಯಾವುದಾದರೂ ಕೆಲಸ ಪೂರ್ಣಗೊಳ್ಳುವುದುಂಟೇ? ಎಂದು ಖುರ್ಷಿದ್ ಪ್ರಶ್ನಿಸಿದ್ದಾರೆ.

ಇಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ. ನಾವೊಂದು ನಿರ್ಧಾರವನ್ನು ತೆಗೆದುಕೊಂಡಿದ್ದೆವು. ಅದನ್ನು ಫೈಲ್ ಮಾಡಿದ ನಂತರ ಸ್ವೀಕರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಹಿಂಡಾಲ್ಕೋ ಕಂಪನಿಗೆ ತಲಬಿರಾ -2 ಮತ್ತು 3 ಕಲ್ಲಿದ್ದಲು ಘಟಕಗಳನ್ನು ಹಂಚಿಕೆ ಮಾಡಿರುವ ಬಗ್ಗೆ ಪ್ರಧಾನಿ ಕಚೇರಿ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಪ್ರಧಾನಿಯವರನ್ನು ಬೆಂಬಲಿಸಿ ಖುರ್ಷಿದ್ ಈ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement