ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೇರನ್‌ನಲ್ಲಿ ಸೇನಾ ಕಾರ್ಯಾಚರಣೆ ಹೇಳಿಕೆ ಬಗ್ಗೆ ಶಂಕೆ?

ಕಳೆದ 15 ದಿನಗಳಿಂದ ಸೇನಾ ಕಾರ್ಯಾಚರಣೆ ನಡೆಯುತ್ತಿದ್ದ ಕೇರನ್ ಸೆಕ್ಟರ್‌ನಲ್ಲಿ ಇದೀಗ ಕಾರ್ಯಾಚರಣೆ ಅಂತ್ಯಗೊಂಡಿದೆ. ಆದರೆ...

Rashmi Kasaragodu
Updated On : 20 Oct 2013, 7:45 am

ಶ್ರೀನಗರ: ಕಳೆದ 15 ದಿನಗಳಿಂದ ಸೇನಾ ಕಾರ್ಯಾಚರಣೆ ನಡೆಯುತ್ತಿದ್ದ ಕೇರನ್ ಸೆಕ್ಟರ್‌ನಲ್ಲಿ ಇದೀಗ ಕಾರ್ಯಾಚರಣೆ ಅಂತ್ಯಗೊಂಡಿದೆ. ಆದರೆ ಪಾಕಿಸ್ತಾನದಿಂದ ಗಡಿಭಾಗಕ್ಕೆ ಕೆಲವರು ನುಸುಳಿದ್ದಾರೆ ಎಂಬ ಸುದ್ದಿಯಿದ್ದು, ಆ ನುಸುಳಕೋರರು ಏನಾದರು?ಎಂಬ ಪ್ರಶ್ನೆ ಎದ್ದಿದೆ.

ಅಕ್ಟೋಬರ್ 8ರಂದು ಸೇನೆ ತಮ್ಮ ಕಾರ್ಯಾಚರಣೆ ನಿಲ್ಲಿಸಲು ತೀರ್ಮಾನಿಸಿದ್ದರೂ, ನಂತರ 5 ದಿನಗಳ ಕಾಲ ಕಾರ್ಯಾಚರಣೆ ಮುಂದುವರಿದಿತ್ತು. ಕೊನೆಗೂ ಬಿಎಸ್‌ಎಫ್ ಮತ್ತು ಸೇನಾ ಪಡೆ ಪಾಕಿಸ್ತಾನ ಕಬಳಿಸಿರುವ ಕಾಶ್ಮೀರದ ಭಾಗವಾಗಿರುವ ಮತ್ತು ಜಮ್ಮ ಮತ್ತು ಕಾಶ್ಮೀರವನ್ನು ಬೇರ್ಪಡಿಸುವ ಗ್ರಾಮವಾದ ಶಲಾಬಂಟುಗೆ ತಲುಪುವಲ್ಲಿ ಯಶಸ್ವಿಯಾಗಿದೆ.
1990ರಲ್ಲಿ ಶಲಾಬಂಟು ನುಸುಳುಕೋರರು ದಾಳಿಯಿಡುತ್ತಿದ್ದ ಗ್ರಾಮವಾಗಿತ್ತು.

ಆದಾಗ್ಯೂ, ಕೇರನ್ ಎನ್‌ಕೌಂಟರ್‌ನಲ್ಲಿ ಏನೇನು ನಡೆಯಿತು? ಎಂಬುದರ ಬಗ್ಗೆ ವರದಿ ನೀಡಬೇಕೆಂದು ಎಂದು ಕೇಂದ್ರ ಹಾಗು ರಾಜ್ಯ ರಕ್ಷಣಾ ಏಜೆನ್ಸಿಗಳು ಸೇನೆಯನ್ನು ಕೇಳಿವೆ.

ಆದರೆ ಕೇರನ್ ಕಾರ್ಯಾಚರಣೆಯ ಬಗ್ಗೆ ಇದ್ದ ಎಲ್ಲ ಸಂದೇಹಗಳನ್ನು ತಳ್ಳಿ ಹಾಕಿದ ಸೇನಾಪಡೆ, ಇದೀಗ ನಾವು ನಿಯಂತ್ರಣ ರೇಖೆಯಲ್ಲಿ ಅಧಿಪತ್ಯ ಸ್ಥಾಪಿಸಿದ್ದೇವೆ ಎಂದು ಹೇಳಿದೆ.

ತಾವು ತಮ್ಮ ಕಾರ್ಯಾಚರಣೆಯಲ್ಲಿ 8 ಉಗ್ರರನ್ನು ಹತ್ಯೆಗೈದಿದ್ದೇವೆ ಎಂದು ಸೇನೆ ಹೇಳಿದೆ. ಆದರೆ ಶಲಾಬಂಟುವಿನಿಂದ ಅನತಿ ದೂರದಲ್ಲಿರುವ ಮೂರು ವಿವಿಧ ಪ್ರದೇಶಗಳಲ್ಲಿ ಸಾವು ನೋವು ಸಂಭವಿಸಿರುವ ಬಗ್ಗೆ ಅಲ್ಲಿನ ಸ್ಥಳೀಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ಖೋಖ್ರಿ, ಕುಲಾರಿ ಮತ್ತು ಮಂಗೇರ್‌ಟಾ ಎಂಬಲ್ಲಿ ಬಿಎಸ್‌ಎಫ್ ಮತ್ತು ಸೈನಿಕರು ಜಂಟಿ ಕಾರ್ಯಾಚರಣೆ ಮಾಡಿ ಶನಿವಾರ ಪ್ರಸ್ತುತ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

ಪೊಲೀಸರ ಎಫ್‌ಐಆರ್ ಬಗ್ಗೆ ಸೇನಾ ಪ್ರಧಾನ ಕಾರ್ಯಾಲಯಕ್ಕೆ ಇಮೇಲ್ ಮೂಲಕ ಪ್ರಶ್ನೆ ಕೇಳಿದಾಗ, ಇದೆಲ್ಲವೂ ತಪ್ಪು, ಸೇನೆ ನಿಯಂತ್ರಣ ರೇಖೆಯಲ್ಲಿ ಅಧಿಪತ್ಯ ಸ್ಥಾಪಿಸಿಕೊಂಡಿದೆ ಎಂದು ಉತ್ತರಿಸಿದೆ.

ಓರ್ವ ಸೇನಾ ಯೋಧ ಗಾಯಗೊಂಡಾದ 241/13 , ಎರಡನೇ ಎಫ್ ಐ ಆರ್ ದಾಖಲಿಸಲಾಗಿತ್ತು. ಈ ಘಟನೆ ಲಸಾಡ್‌ನಾಥ್ ಪ್ರದೇಶದಲ್ಲಿ ಸಂಭವಿಸಿತ್ತು.  ಅದೇ ವೇಳೆ ಶಲಾಬಂಟು ಗ್ರಾಮದಿಂದ 27 ಕಿ.ಮೀ ದೂರವಿರುವ ಗುಜ್ಜರ್ ಡೋರ್‌ನಲ್ಲಿ ಇಬ್ಬರು ಉಗ್ರರು ಹತ್ಯೆಗೈಯ್ಯಲ್ಪಟ್ಟಾಗ ಅಕ್ಟೋಬರ್ 4ರಂದು ಮೂರನೇ ಎಫ್‌ಐಆರ್ 09/13ನ್ನು ದಾಖಲಿಸಲಾಗಿತ್ತು. ಈ ಎಲ್ಲ ಎಫ್‌ಐಆರ್ ಕೇರನ್ ಪೊಲೀಸ್ ಸ್ಟೇಷನ್‌ನಲ್ಲಿ ದಾಖಲಾಗಿದೆ.

ಗುಜ್ಜರ್ ಡೋರ್‌ನಲ್ಲಿ ನಡೆದ ಘಟನೆಯ ಬಗ್ಗೆ ವಿವರಿಸಿದ ಸೇನೆ ತಾವು ಮೂರನೇ ಉಗ್ರನ ಶವವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಹೇಳಿತ್ತು.

ಉಗ್ರರು ಶಲಾಬಂಟು ಪ್ರದೇಶದಲ್ಲಿ ನುಸುಳಿದ್ದು, ಅಲ್ಲಿ ಸೇನೆಯ ಕಣ್ಗಾವಲು ಇದೆ. ಗುಜ್ಜರ್ ಡೋರ್ ಮತ್ತು ಫತೇಗಲಿಯ ಹಲವಾರು ಪ್ರದೇಶದಲ್ಲಿ ನುಸುಳುಕೋರರು ನುಸುಳಲು ತೊಡಗಿದಾಗ ನಾವು ಗುಂಡು ಹಾರಿಸಿ ಅವರ ಹತ್ಯೆಗೈದಿದ್ದೇವೆ ಎಂದು ಸೇನಾಪಡೆ ಹೇಳಿದೆ.

ಏತನ್ಮಧ್ಯೆ, 8ನೇ ಶವವು ನಿಯಂತ್ರಣ ರೇಖೆಯಲ್ಲಿ ಬಿದ್ದಿದ್ದು, ಅಲ್ಲಿ ಭಾರೀ ಗುಂಡಿನ ದಾಳಿ ನಡೆಯುತ್ತಿರುವುದರಿಂದ ಶವವನ್ನು ಹೊತ್ತೊಯ್ಯಲು ಸಾಧ್ಯವಾಗಿಲ್ಲ ಎಂದು ಸೇನೆ ಹೇಳಿದೆ.

ಅದೇ ವೇಳೆ ನಿಯಂತ್ರಣ ರೇಖೆಯಿಂದ ಸುಮಾರು 20 ಕಿ.ಮೀ ವರೆಗೆ ಮೃತದೇಹವನ್ನು ಎಳೆದುಕೊಂಡು ಹೋಗಲಾಗಿದೆಯೇ? ಎಂಬ ಶಂಕೆಯೂ ಇಲ್ಲಿ ಹುಟ್ಟಿಕೊಂಡಿದೆ ಎಂದು ಸೇನಾಮೂಲಗಳು ಹೇಳಿವೆ.

ಪಾಕಿಸ್ತಾನದಲ್ಲಿರುವ ಕೆಲವು ಮಾಧ್ಯಮಗಳು ಕೇರನ್ ಸೆಕ್ಟರ್‌ನ ಆ ಕಡೆಯಿರುವ ನೀಲಂ ಕಣಿವೆಯಿಂದ ಮೂವರು ನಾಗರಿಕರನ್ನು ಭಾರತೀಯ ಸೇನೆ ಅಪಹರಣಗೈದಿದೆ ಎಂದು ಆರೋಪಿಸಿದ್ದು, ಇದರಲ್ಲಿ ಇಬ್ಬರನ್ನು ಸೇನೆ ಹತ್ಯೆಗೈದಿದೆ ಮತ್ತು ಓರ್ವ ತಪ್ಪಿಸಿಕೊಂಡು ಹೋಗಿದ್ದಾನೆ ಎಂದು ವರದಿ ಮಾಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement