ಫಾರ್ಚೂನ್ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 4 ಭಾರತೀಯರು
ಅಮೆರಿಕದ ಫಾರ್ಚೂನ್ ಮ್ಯಾಗಜೀನ್ ಸಿದ್ಧಪಡಿಸಿದ ಪ್ರಭಾವಿ 50 ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ನಾಲ್ವರು ಭಾರತೀಯ ಮಹಿಳೆಯರು...
ನ್ಯೂಯಾರ್ಕ್: ಅಮೆರಿಕದ ಫಾರ್ಚೂನ್ ಮ್ಯಾಗಜೀನ್ ಸಿದ್ಧಪಡಿಸಿದ ಪ್ರಭಾವಿ 50 ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ನಾಲ್ವರು ಭಾರತೀಯ ಮಹಿಳೆಯರು ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಪ್ರಸ್ತುತ ಪಟ್ಟಿಯಲ್ಲಿ ಪೆಪ್ಸಿಕೋ ಮುಖ್ಯಸ್ಥೆ ಇಂದ್ರಾ ನೂಯಿ ಎರಡನೇ ಸ್ಥಾನ ಗಳಿಸಿದ್ದಾರೆ.
ಈ ಪಟ್ಟಿಯಲ್ಲಿ ಕೋಚ್ಚಾರ್ 4ನೇ ಸ್ಥಾನಗಳಿಸಿದ್ದು, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ 17ನೇ ಸ್ಥಾನ, ಆಕ್ಸಿಸ್ ಬ್ಯಾಂಕ್ನ ಶಿಖಾ ಶರ್ಮ 32 ನೇ ಸ್ಥಾನ ಮತ್ತು ಹೆಚ್ಎಸ್ಬಿಸಿಯ ನೈನಾ ಲಾಲ್ ಕಿದ್ವಾಯಿ 42ನೇ ಸ್ಥಾನಗಳಿಸಿದ್ದಾರೆ.
ಬ್ರೆಜಿಲ್ನ ಪೆಟ್ರೋಬ್ರಾಸ್ ಸಿಇಓ ಮರಿಯಾ ದಾಸ್ ಫೋಸ್ಟರ್ ಅವರು ಪ್ರಥಮ ಸ್ಥಾನಗಳಿಸಿದ್ದು, ಟರ್ಕಿಯ ಕಾಂಗ್ಲೋಮೆರೇಟ್ ಸಬಾಂಚಿ ಹೋಲ್ಡಿಂಗ್ಸ್ನ ಗುಲೇರ್ ಸಬಾಂಚಿ ಎರಡನೇ ಸ್ಥಾನ ಮತ್ತು ಆಸ್ಟ್ರೇಲಿಯಾದ ಬೃಹತ್ ಬ್ಯಾಂಕ್ ವೆಸ್ಟ್ಪ್ಯಾಕ್ನ ಸಿಇಓ ಗೈಲ್ ಕೆಲ್ಲಿ ಮೂರನೇ ಸ್ಥಾನಗಳಿಸಿದ್ದಾರೆ.