ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಸಾರಾಂ ಅರ್ಜಿ ತಿರಸ್ಕರಿಸಿದ ಸುಪ್ರೀಂ

ವಿವಾದಿತ ದೇವಮಾನವ ಅಸಾರಾಂ ಬಾಪು ಅವರಿಗೆ ಸಂಬಂಧಪಟ್ಟಿರುವ ಪ್ರಕರಣಗಳ ವರದಿಯನ್ನು ಪ್ರಸಾರ ಮಾಡದಂತೆ...

Vishwanath S
Updated On : 21 Oct 2013, 3:15 am

ಸೂರತ್: ವಿವಾದಿತ ದೇವಮಾನವ ಅಸಾರಾಂ ಬಾಪು ಅವರಿಗೆ ಸಂಬಂಧಪಟ್ಟಿರುವ ಪ್ರಕರಣಗಳ ವರದಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ತಡೆ ಹಾಕಬೇಕು ಎಂದು ಬಾಪು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಇದೇ ವೇಳೆ, ಬಾಪು ವಿರುದ್ಧ ಕೋಲಾಹಲ ಎಬ್ಬಿಸುವಂತ ವರದಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಸೂಚಿಸಿದೆ.

ಬಾಲಕಿಯೊರ್ವಳಿಗೆ ಲೈಂಕಿಗ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಸೇರಿರುವ ಅಸಾರಾಂ ಬಾಪು, ಮತ್ತು ಅವರ ಪುತ್ರ ನಾರಾಯಣ್ ಸಾಯಿ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕೋಲಾಹಲ ಎಬ್ಬಿಸುವಂತ ವರದಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಸೂಚಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ನನ್ನ ಮತ್ತು ಪುತ್ರ ಸಾಯಿ ವಿರುದ್ಧವಾಗಿ ವರದಿಗಳನ್ನು ಪ್ರಸಾರ ಮಾಡುತ್ತಿವೆ. ಹೀಗಾಗಿ ಸಮಾಜದಲ್ಲಿನ ನಮ್ಮ ಘನತೆಗೆ ದಕ್ಕೆಯಾಗುತ್ತಿದೆ ಎಂದು ಆರೋಪಿಸಿ ಮಾಧ್ಯಮಗಳ ಮೇಲೆ ಕಡಿವಾಣ ಹಾಕಬೇಕು ಎಂದು ಬಾಪು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ.

ಸೂರತ್‌ಗೆ ಸೇರಿದ ಬಾಲಕಿರ್ವರಿಗೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅಸಾರಾಂ ಬಾಪು ಮತ್ತು ಪುತ್ರ ನಾರಾಯಣ್ ಸಾಯಿ, ಮತ್ತು ಬಾಪು ಅವರು ಹೆಂಡತಿ ಮತ್ತು ಮಗಳು ಕೃತ್ಯಕ್ಕೆ ಸಹಕರಿಸಿದ್ದಾರೆ  ಎಂದು ಸೂರತ್‌ನಲ್ಲಿ ಪ್ರಕರಣಕ್ಕೆ ದಾಖಲಾಗಿತ್ತು. ಅಂದಿನಿಂದ ನಾರಾಯಣ್ ಸಾಯಿ ತಲೆಮರೆಸಿಕೊಂಡಿದ್ದಾರೆ. ಈ ಸಂಬಂಧ ಸಾಯಿ ಸೂರತ್ ಕೋರ್ಟ್‌ಗೆ ನಿರೀಕ್ಷಣ ಜಾಮೀನು ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆಗೆ ನಡೆಯಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಪು ಅವರು ಹೆಂಡತಿ ಮಗಳನ್ನು ಕೋರ್ಟ್ ಮುಂದೆ ಎಸ್‌ಐಟಿ ಹಾಜರು ಪಡಿಸಲಿದೆ. ತಲೆಮರೆಸಿಕೊಂಡಿರುವ ಸಾಯಿ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಯಾಗಿದೆ.

ಜೋಧ್‌ಪುರದಲ್ಲಿ ಅಸಾರಾಮ್ ಟ್ರಸ್ಟ್ ನಡೆಸುತ್ತಿರುವ ಹಾಸ್ಟೆಲ್‌ನಲ್ಲಿರುವ 15 ವರ್ಷದ ಬಾಲಕಿಯೊಬ್ಬಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಧಾರ್ಮಿಕ ಗುರು ಅಸಾರಾಮ್ ಬಾಪು ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದಳು. ರಾಜಸ್ಥಾನದಲ್ಲಿ ಜೀವ ಭಯವಿದ್ದುದ್ದರಿಂದ ಇಲ್ಲಿಗೆ ಬರಬೇಕಾಯಿತು ಎಂದು ಆಕೆಯ ತಂದೆ ಹೇಳಿದ್ದರು. ದೂರು ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ಪ್ರಕರಣವನ್ನು ರಾಜಸ್ಥಾನಕ್ಕೆ ವರ್ಗಾಯಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement