ಕುಡುಂಕುಳಂ ಸ್ಥಾವರ ಭಾರತ-ರಷ್ಯಾದ ಸ್ನೇಹದ ಸಂಕೇತ
ಕುಡುಂಕುಳಂ ಪರಮಾಣು ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ ಆರಂಭಗೊಂಡಿದ್ದು, ಇದು ಭಾರತ ಮತ್ತು ರಷ್ಯಾದ ಸ್ನೇಹದ...
ಮಾಸ್ಕೋ: ಕುಡುಂಕುಳಂ ಪರಮಾಣು ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ ಆರಂಭಗೊಂಡಿದ್ದು, ಇದು ಭಾರತ ಮತ್ತು ರಷ್ಯಾದ ಸ್ನೇಹದ ಸಂಕೇತ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸೋಮವಾರ ಹೇಳಿದ್ದಾರೆ.
ಇಂದು ಮಾಸ್ಕೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಡುಂಕುಳಂ ಪರಮಾಣು ಸ್ಥಾವರ ಆರಂಭಗೊಂಡಿದೆ. ಹೀಗಾಗಿ ಸದ್ಯದಲ್ಲೇ ವಾಣಿಜ್ಯ ಬಳಕೆ ನಿಮಿತ್ತ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದರು. ಈ ಅಣು ಸ್ಥಾವರದ ಉತ್ಪಾದನೆಯಿಂದ ದೇಶದಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರಕಿದಂತಾಗುತ್ತದೆ ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಕುಡುಂಕುಳಂ ಸ್ಥಾವರ ಭಾರತ-ರಷ್ಯಾದ ಸ್ನೇಹದ ಸಂಕೇತವಾಗಿದ್ದು, ಉಭಯ ರಾಷ್ಟ್ರಗಳ ನಡುವಣ ಉತ್ತಮ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಎಂದರು.