ಚೀನಾ, ಗಡಿ ವಿವಾದ ಇತ್ಯರ್ಥಕ್ಕೆ ಸಮಯಬೇಕು: ಪ್ರಧಾನಿ
ಚೀನಾದೊಂದಿಗಿನ ಗಡಿ ವಿವಾದ ಸಾಮಾನ್ಯ ವಿಷಯವಲ್ಲ. ದ್ವಿಪಕ್ಷಿಯ ಮಾತುಕತೆಯ ಮೂಲಕ ವಿವಾದವನ್ನು ಪರಿಹಿರಿಸಿಕೊಳ್ಳಲು...
ಬೀಚಿಂಗ್: ಚೀನಾದೊಂದಿಗಿನ ಗಡಿ ವಿವಾದ ಸಾಮಾನ್ಯ ವಿಷಯವಲ್ಲ. ದ್ವಿಪಕ್ಷೀಯ ಮಾತುಕತೆಯ ಮೂಲಕ ವಿವಾದವನ್ನು ಪರಿಹಿರಿಸಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮಂಗಳವಾರ ಹೇಳಿದ್ದಾರೆ.
ರಷ್ಯಾ ಪ್ರವಾಸದ ನಂತರ ಚೀನಾ ಪ್ರವಾಸ ಕೈಗೊಂಡಿರುವ ಪ್ರಧಾನಿ ಸಿಂಗ್ ಅವರು, ನನಗೆ ನಂಬಿಕೆ ಇದೆ. ಮುಂದಿನ ಚೀನಾ ಪ್ರವಾಸದ ವೇಳೆಗೆ ಚೀನಾ ಜೊತೆಗಿನ ಬಾಂಧವ್ಯ ವೃದ್ದಿಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಈ ಪ್ರವಾಸದ ಮೂಲಕ ಚೀನಾ-ಭಾರತದ ನಡುವಣ ಹಳಸಿರುವ ಬಾಂಧವ್ಯವನ್ನು ಉತ್ತಮಗೊಳಿಸಲು ಪ್ರಯತ್ನಿಸಲಾಗುವುದು ಎಂದರು. ದ್ವಿಪಕ್ಷೀಯ ಮಾತುಕತೆಗಳ ಮೂಲಕ ಸಮಸ್ಯೆಗಳನ್ನು ಪರಿಹಿರಿಸಿಕೊಳ್ಳಲಾಗುತ್ತದೆ ಎಂದು ಸಿಂಗ್ ತಿಳಿಸಿದ್ದಾರೆ.
ಇದೇ ವೇಳೆ, ಕಳೆದ 9 ವರ್ಷಗಳಲ್ಲಿ ಭಾರತದ ಪ್ರಧಾನಿಯಾಗಿ ನಾನು ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದೇನೆ. ಅಲ್ಲದೆ ಭಾರತ-ಚೀನಾ ನಡುವಣ ಸಂಬಂಧ ಉತ್ತಮಗೊಳಿಸುವಲ್ಲಿ ಶ್ರಮಿಸುತ್ತಿದ್ದೇನೆ ಎಂದು ಚೀನಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಹೇಳಿದ್ದಾರೆ.