ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪುಟಿನ್‌ರಿಂದ ಪ್ರಧಾನಿ ಸಿಂಗ್‌ಗೆ ವಿಶೇಷ ಗಿಫ್ಟ್

ರಷ್ಯಾಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್...

Rashmi Kasaragodu
Updated On : 22 Oct 2013, 1:56 am

ಮಾಸ್ಕೋ: ರಷ್ಯಾಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೂರು ವಿಶೇಷ ಉಡುಗೊರೆಗಳನ್ನು ನೀಡಿದ್ದಾರೆ.

ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ಉತ್ತಮ ಪಡಿಸಲು ಹಾಗು ರಷ್ಯಾ-ಭಾರತ ನಡುವಿನ ಸ್ನೇಹವನ್ನು ಕಾಯ್ದುಕೊಳ್ಳುವ ಬಗ್ಗೆ ಪ್ರಧಾನಿ ಸಿಂಗ್ ಮತ್ತು ಪುಟಿನ್ ಮಾತುಕತೆ ನಡೆಸಿದ್ದಾರೆ.

ಅದೇ ವೇಳೆ ಪುಟಿನ್ ಮೂರು ವಿಶೇಷ ಉಡುಗೊರೆಗಳನ್ನು ಪ್ರಧಾನಿ ಸಿಂಗ್‌ಗೆ ಕೊಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ರಷ್ಯನ್ ಚಕ್ರವರ್ತಿ ನಿಕೋಲಸ್ 2 ಅವರ ಪೇಟಿಂಗ್, 16ನೇ ಶತಮಾನದಲ್ಲಿನ ಭಾರತದ ನಕ್ಷೆ ಮತ್ತು ಮೊಗಲರ ಕಾಲದಲ್ಲಿದ್ದ ನಾಣ್ಯವನ್ನು ಪ್ರಧಾನಿ ಸಿಂಗ್‌ಗೆ ಪುಟಿನ್ ಉಡುಗೊರೆಯಾಗಿ ನೀಡಿದ್ದಾರೆ.

ಭಾರತ ಮತ್ತು ರಷ್ಯಾ ನಡುವಿನ ಐತಿಹಾಸಿಕ ಸಂಬಂಧವನ್ನು ಪ್ರತಿನಿಧೀಕರಿಸುವ ಈ ಉಡುಗೊರೆಗಳನ್ನು ಪುಟಿನ್ ಅವರೇ ಸ್ವತಃ ಆಯ್ಕೆ ಮಾಡಿದ್ದಾರೆ ಎಂದು ಭಾರತೀಯ ರಾಯಭಾರಿ ಅಜಯ್ ಮಲ್ಹೋತ್ರಾ ಹೇಳಿದ್ದಾರೆ.

1890-91ರಲ್ಲಿ ಭಾರತ ಹಲವಾರು ನಗರಗಳನ್ನು ಸುತ್ತಾಡಿ, ಅಲ್ಲಿನ ಮಹಾರಾಜರುಗಳನ್ನು ಭೇಟಿ ಮಾಡಿದ್ದ ನಿಕೋಲಸ್ ಚಕ್ರವರ್ತಿಯ ನೆನಪಿಗಾಗಿ ಅವರ ಪೇಟಿಂಗ್‌ನ್ನು ಸಿಂಗ್‌ಗೆ ಪುಟಿನ್ ಉಡುಗೊರೆಯಾಗಿ ನೀಡಿದ್ದಾರೆ.

ಈ ಹಿಂದೆ ಡಾ ಮನಮೋಹನ್ ಸಿಂಗ್ ಅವರಿಗೆ ಮಾಸ್ಕೋ ಇನ್ಸಿಟ್ಯೂಟ್ ಆಫ್ ಇಂಟರ್‌ನ್ಯಾಷನಲ್ ರಿಲೇಷನ್ಸ್ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

ಪುಟಿನ್ ಅವರ ಉಡುಗೊರೆಯನ್ನು ಸ್ವೀಕರಿಸಿದ ಪ್ರಧಾನಿ, ನಿಮ್ಮ ಉಡುಗೊರೆಯು ಭಾರತ ಮತ್ತು ರಷ್ಯಾ ನಡುವಿನ ಐತಿಹಾಸಿಕ ಸಂಬಂಧವನ್ನು ಮತ್ತೆ ನೆನಪಿಸುವ ಮೂಲಕ ಹೃದಯವನ್ನು ಸ್ಪರ್ಷಿಸಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement