ನಾನು ಸಾವಿಗೆ ಹೆದರುವುದಿಲ್ಲ: ರಾಹುಲ್
ಮಧ್ಯಪ್ರದೇಶದ ಇಂಡೋರ್ ಮತ್ತು ಸಾಗರ್ ಜಿಲ್ಲೆಗಳಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್...
ಇಂಡೋರ್: ನಾನು ಸಾವಿಗೆ ಹೆದರುವುದಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.
ಮಧ್ಯಪ್ರದೇಶದ ಇಂಡೋರ್ ಮತ್ತು ಸಾಗರ್ ಜಿಲ್ಲೆಗಳಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್, ನನ್ನನ್ನು ಹತ್ಯೆಮಾಡತ್ತಾರೆಂಬ ಭಯ ಎನಗಿಲ್ಲ ಎಂದು ತಿಳಿಸಿದ್ದಾರೆ.
ನಮ್ಮ ತಾಯಿ ಸೋನಿಯಾ ಗಾಂಧಿ ಹೇಳಿದರು, ಯಾಕೆ ನನ್ನ ಕಥೆಗಳನ್ನಾ ಹೇಳುತ್ತೀಯಾ ಎಂದು. ಹಾಗಾಗಿ ಈಗ ನಾನು ನನ್ನ ಕಥೆಯನ್ನಾ ಹೇಳುತ್ತೇನೆ. ಚುನಾವಣಾ ಸಭೆಗಳಲ್ಲಿ ನನ್ನ ವೈಯಕ್ತಿಕ ಕಥೆಗಳನ್ನಾ ಹೇಳಬಾರದು. ಆದರೆ ನಾನು ಹೇಳುತ್ತೇನೆ ಎಂದು ರಾಹುಲ್ ರ್ಯಾಲಿಯಲ್ಲಿ ಮನಬಿಚ್ಚಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕರಲ್ಲಿ ಬಹಿರಂಗವಾಗಿ ಹಂಚಿಕೊಂಡಿದ್ದಾರೆ.
ನಮ್ಮ ತಂದೆ ರಾಜೀವ್ ಗಾಂಧಿ ಮಾಡಿದಂತ ನಿಯಮ ಉಲ್ಲಂಘನೆ ಮಾಡಿದಕ್ಕಾಗಿ, ನಮ್ಮ ಅಜ್ಜಿ ಇಂದಿರಾಗಾಂಧಿ ಅವರು, ನನ್ನನ್ನು ತಂದೆಯ ಕೋಪದಿಂದ ರಕ್ಷಿಸಿದರು ಎಂದು ರಾಹುಲ್ ತಮ್ಮ ಮಾತನ್ನು ಆರಂಭಿಸಿದರು.
ಇಂದಿರಾಗಾಂಧಿ ಹತ್ಯೆ ಕುರಿತು ಮಾತನಾಡಿದ ಅವರು, ನಮ್ಮ ಅಜ್ಜಿಯಯನ್ನು ಬೆಂಟ್ ಸಿಂಗ್ ಮತ್ತು ಇತರರು ಹತ್ಯೆಮಾಡಲು ಮುಂದಾಗಿದ್ದು ನನಗೆ ನಿಧಾನವಾಗಿ ತಿಳಿಯಿತು. ಅಜ್ಜಿಯನ್ನು ಬೆಂಟ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಅವರು ಗುಂಡು ಹಾರಿಸಿ ಹತ್ಯೆಗೈದಿರುವ ಘಟನೆಯಿಂದ ಹೊರಬರಲು ನನಗೆ 10-15 ವರ್ಷ ಬೇಕಾಯಿತು.
ಆದೆರ ಈ ಘಟನೆಯನ್ನು ರಾಜಕೀಯ ಲಾಭಕ್ಕಾಗಿ, ರಾಜಕೀಯ ಪಕ್ಷಗಳು ಗಲಭೆಯನ್ನು ಪ್ರಚೋದಿಸಿದರು. ಭಾರತೀಯ ಜನತಾ ಪಕ್ಷದ ನಾಯಕರು ಮುಜಾಫರ್ನಗರ್, ಕಾಶ್ಮೀರ ಮತ್ತು ಗುಜರಾತ್ಗೆ ತೆರಳಿ ಹಿಂಸಾಚಾರಕ್ಕೆ ಪ್ರಚೋದಿಸಿದ್ದರು.
ನನ್ನ ಅಜ್ಜಿ ಮತ್ತು ತಂದೆ ಅವರನ್ನು ಹತ್ಯೆಗೈದವರು ನನ್ನನ್ನು ಹತ್ಯೆ ಮಾಡಬಹುದು ಎಂಬುವುದನ್ನಾ ಎರಡು ಬಾರಿ ಎದರಿಸಿದ್ದೇನೆ. ಆದರೆ ನಾನು ಸಾವಿಗೆ ಹೆದರುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ಕಾಂಗ್ರೆಸ್ ಬಡವರ ಏಳಿಗೆಗಾಗಿ ದುಡಿದಿದೆ. ಜನರಿಗೆ ಉದ್ಯೋಗವಕಾಶ ಕಲ್ಪಿಸಿದೆ. ನಾವು ಆಹಾರ ಮಸೂದೆಯನ್ನು ಜಾರಿಗೊಳಿಸಿ, ಜನರ ಹಕ್ಕನ್ನು ಪಡೆದುಕೊಳ್ಳಲು ದಾರಿ ಕಲ್ಪಿಸಿದ್ದೇವೆ. ಶ್ರೀಮಂತ ಮತ್ತು ಬಡ ವರ್ಗದವರು ಕೈಜೋಡಿಸಿದರೆ ರಾಷ್ಟ್ರವನ್ನು ಮುನ್ನಡೆಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.