ಪಾಕ್ಗೆ ಯೋಗ್ಯವೆನಿಸುವ ಪ್ರತಿಕ್ರಿಯೆ ನೀಡಲಾಗುವುದು: ಶಿಂಧೆ
ನವದೆಹಲಿ: ಗಡಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನಕ್ಕೆ ಯೋಗ್ಯವೆನಿಸುವಂತಹ ಪ್ರತಿಕ್ರಿಯನ್ನೇ ನೀಡಲಾಗುವುದು ಎಂದು ಕೇಂದ್ರ ಗೃಹ ಮಂತ್ರಿ ಸುಶೀಲ್ ಕುಮಾರ್ ಶಿಂಧೆ ಬುಧವಾರ ಹೇಳಿದ್ದಾರೆ.
ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಹೇರಲಾಗಿರುವ ಗಡಿ ನಿಯಂತ್ರಣ ರೇಖೆಯನ್ನು ಪಾಕ್ ಸೈನಿಕರು ದಾಟುತ್ತಿದ್ದು, ಕಾನೂನನ್ನು ಮುರಿಯುತ್ತಿದ್ದಾರೆ. ಅಕ್ರಮ ದಾಳಿಯಿಂದಾಗಿ ಭಾರತೀಯ ಸೈನಿಕರು ಮೃತಪಟ್ಟಿದ್ದಾರೆ. ಪಾಕ್ನ ಈ ನಡುವಳಿಕೆ ತುಂಬಾ ಬೇಸರ ತಂದಿದೆ ಎಂದು ಶಿಂಧೆ ವಿಷಾದಿಸಿದ್ದಾರೆ.
ಪಾಕ್ ತನ್ನ ಎಲ್ಲೆಯನ್ನು ಮೀರುತ್ತಿದೆ. ಪಾಕ್ಗೆ ಸರಿಯಾಗಿ ಸಲ್ಲುವಂತಹ ಪ್ರತಿಕ್ರಿಯೆಯನ್ನೇ ನಾವು ನೀಡುತ್ತೇವೆ ಎಂದು ಶಿಂಧೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ರಾತ್ರಿ ಪಾಕ್ ಸೈನಿಕರು ಅಕ್ರಮ ದಾಳಿ ನಡೆಸಿ ಬಿಎಸ್ಎಫ್ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ಓರ್ವ ಸೈನಿಕ ಮೃತಪಟ್ಟಿದ್ದು, 7 ಸೈನಿಕರು ಗಂಭೀರವಾಗಿ ಗಾಯಗೊಂಡಿರುವುದು ತುಂಬಾ ನೋವುಂಟಾಗಿದೆ. ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.