ಭಾರತದ ಮೇಲೆ ಅಲ್‌ಖೈದಾ ದಾಳಿ ಸಾಧ್ಯತೆ?
ಹಗೆತನ ತೀರಿಸುವ ಸಲುವಾಗಿ ಅಲ್‌ಖೈದಾ ಉಗ್ರ ಸಂಘಟನೆ ಭಾರತದ ಮೇಲೆ ದಾಳಿ ಮಾಡುವ ಸಾಧ್ಯತೆಗಳಿವೆ ಎಂದು ಅಮೆರಿಕದ ಉಗ್ರ ...
ವಾಷಿಂಗ್ಟನ್: ಹಗೆತನ ತೀರಿಸುವ ಸಲುವಾಗಿ ಅಲ್‌ಖೈದಾ ಉಗ್ರ ಸಂಘಟನೆ ಭಾರತದ ಮೇಲೆ ದಾಳಿ ಮಾಡುವ ಸಾಧ್ಯತೆಗಳಿವೆ ಎಂದು ಅಮೆರಿಕದ ಉಗ್ರ ನಿಗ್ರಹ ತಜ್ಞರು ಹೇಳಿದ್ದಾರೆ.
ಪಾಕಿಸ್ತಾನದಲ್ಲಿರುವ ಅಲ್‌ಖೈದಾ ಉಗ್ರರು ಹಗೆ ತೀರಿಸದೆ ಸುಮ್ಮನಿರಲ್ಲ ಎಂದು ಹೇಳುವಂತಿಲ್ಲ ಅಮೆರಿಕ ಉಗ್ರ ನಿಗ್ರಹ ತಂಡ ತಜ್ಞರಾದ ಸ್ಟೀಫನ್ ಟಾಕ್ಲೆನ್ ಆನ್‌ಲೈನ್ ಸುದ್ದಿ ಮಾಧ್ಯಮವೊಂದರಲ್ಲಿ ಬರೆದ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಪಾಕಿಸ್ತಾನದಲ್ಲಿ ನುಸುಳುವಿಕೆ ಜಾಸ್ತಿಯಾಗುತ್ತಿರುವುದರಿಂದ ಉಗ್ರರು ಭಾರತದ ಮೇಲೆ ದಾಳಿ ಮಾಡುವ ಸಾಧ್ಯತೆಯಿದೆ ಎಂದು ಸ್ಟೀಫನ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿದ್ದ ಸುಮಾರು 30 ಉಗ್ರರ ನಾಯಕರು 2008ರಿಂದ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಈವಾಗ ಕೆಲವೇ ಕೆಲವು ಹಿರಿಯ ನಾಯಕರು ಮಾತ್ರ ಬಾಕಿಯಾಗಿದ್ದಾರೆ. ಆದ್ದರಿಂದ ಉಗ್ರರು ಪಾಕಿಸ್ತಾನದಲ್ಲಿನ ಸಾಮಾನ್ಯ ಜನರನ್ನು ಕೂಡಾ ತಮ್ಮ ಸಂಘಟನೆಯೊಂದಿಗೆ ಸೇರಿಸಿ ಕೊಳ್ಳುತ್ತಿದ್ದಾರೆ. ಇಲ್ಯಾಸ್ ಕಶ್ಮೀರಿಯೇ ಇದಕ್ಕೆ ಉದಾಹರಣೆ ಎಂದು ಸ್ಟೀಫನ್ ತಮ್ಮ ಲೇಖನದಲ್ಲಿ ಹೇಳಿದ್ದಾರೆ.