ಹರ್ಷವರ್ಧನ ಬಿಜೆಪಿಯ ಮನ್‌ಮೋಹನ್ ಸಿಂಗ್ ಇದ್ದಂತೆ: ಎಎಪಿ
ನವದೆಹಲಿ: ದೆಹಲಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾದ ಹರ್ಷವರ್ಧನ ಅವರು ಭಾರತೀಯ ಜನತಾ ಪಕ್ಷದ ಮನಮೋಹನ್ ಸಿಂಗ್ ಇದ್ದಂತೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ) ಬುಧವಾರ ಹೇಳಿದೆ.
ಇಂದು 2013ರ ದೆಹಲಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹರ್ಷವರ್ಧನ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ಇದರ ಬೆನ್ನಲ್ಲೇ ಬಿಜೆಪಿ ಕಾಲೆಳೆದಿರುವ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಹರ್ಷವರ್ಧನ ಅವರು ಮನಮೋಹನ್ ಸಿಂಗ್ ಇದ್ದ ಹಾಗೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ಅವರು ಭ್ರಷ್ಟಾಚಾರ ತಡೆಯುವಲ್ಲಿ ವಿಫಲರಾದರು. ಅದೇ ರೀತಿ ಈಗ ಬಿಜೆಪಿ ದೆಹಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹರ್ಷವರ್ಧನನ್ನು ಆಯ್ಕೆ ಮಾಡಿದೆ. ಇವರು ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ತಡೆಯುತ್ತಾರೋ ಎಂದು ಅರವಿಂದ್ ವ್ಯಂಗ್ಯವಾಡಿದ್ದಾರೆ.