ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಂತರಾಷ್ಟ್ರೀಯ ಗಡಿ ಭಾಗಕ್ಕೆ ಮತ್ತಷ್ಟು ಪಾಕ್ ಸೈನ್ಯ: ವರದಿ

ಪಾಕಿಸ್ತಾನ ತನ್ನ ಮತ್ತಷ್ಟು ಸೇನಾ ಪಡೆಗಳನ್ನು ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿ ಪ್ರದೇಶಕ್ಕೆ ಕಳುಹಿಸಿದೆ ಎಂದು...

Mainashree
Updated On : 24 Oct 2013, 2:00 am

ಜಮ್ಮು/ಶ್ರೀನಗರ: ಪಾಕಿಸ್ತಾನ ತನ್ನ ಮತ್ತಷ್ಟು ಸೇನಾ ಪಡೆಗಳನ್ನು ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿ ಪ್ರದೇಶಕ್ಕೆ ಕಳುಹಿಸಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಅಕ್ರಮವಾಗಿ ದಾಳಿ ಮಾಡುತ್ತಿರುವ ಪಾಕ್ ಸೇನಾ ಪಡೆಗೆ ಇದರಿಂದಾಗಿ ಮತ್ತಷ್ಟು ಬಲ ಬಂದಂತಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ನೇಹ ಬೆಳೆಸಲು ಬಣ್ಣದ ಮಾತಗಳನ್ನಾಡುತ್ತಿರುವ ಪಾಕ್ ಸರ್ಕಾರ ಒಳಗೊಳಗೆ ಪಾಕ್ ಸೈನಿಕರನ್ನು ಹುರಿದುಂಬಿಸಿ ಭಾರತದ ಸೈನಿಕರ ಮೇಲೆ ಅಕ್ರಮವಾಗಿ ದಾಳಿ ಮಾಡಲು ಪ್ರಚೋದಿಸುತ್ತಿದೆ.

ಇದಕ್ಕೆ ಸಾಕ್ಷಿಯಾಗುವಂತೆ, ಇಂದು ಪಾಕಿಸ್ತಾನದ ಸೇನೆ ಮತ್ತಷ್ಟು ಸೇನಾ ಪಡೆಗಳನ್ನು ಕಳುಹಿಸಿದ್ದು, ಗಡಿ ಭಾಗದಲ್ಲಿ ಸೇನಾಪಡೆಗಳನ್ನು ನಿಯೋಜಿಸಿದ್ದಾರೆ.

ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಮೂಲಗಳ ಪ್ರಕಾರ ಪಾಕ್ ತನ್ನ ಸೇನಾ ಪಡೆಗಳನ್ನು ಹೆಚ್ಚಿನ ಮಟ್ಟದಲ್ಲಿ ಗಡಿ ಪ್ರದೇಶಕ್ಕೆ ನಿಯೋಜಿಸುತ್ತಿರುವುದು ದ್ವೇಷವನ್ನು ಮುಂದುವರೆಸುವ ಉದ್ದೇಶದಿಂದ. ಮತ್ತೆ ಭಾರತದ ಮೇಲೆ ದಾಳಿ ನಡೆಸುವ ಹುನ್ನಾರ ಇದಾಗಿದೆ ಎಂದು ತಿಳಿಸಿವೆ.

ಹೀಗಾಗಿ ಛತ್ತೀಸ್‌ಗಡ್ ಚುನಾವಣೆಗಾಗಿ ಮೀಸಲಿರಿಸಿದ್ದ 400 ಬಿಎಸ್‌ಎಫ್ ಪಡೆಗಳನ್ನು ವಾಪಸ್ ಕರೆಯಲಾಗಿದೆ ಎಂದು ಬಿಎಸ್‌ಎಫ್ ತಿಳಿಸಿದೆ.

ಮಂಗಳವಾರ ರಾತ್ರಿ ಪಾಕ್ ಸೈನಿಕರು ಅಕ್ರಮ ದಾಳಿ ನಡೆಸಿ ಬಿಎಸ್‌ಎಫ್ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಓರ್ವ ಸೈನಿಕ ಮೃತಪಟ್ಟಿದ್ದು, 7 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement