ಇನ್ನೆರಡು ವಾರಗಳಲ್ಲಿ ಈರುಳ್ಳಿ ಬೆಲೆ ಕುಸಿತ: ಪವಾರ್
ಮಳೆಯಿಂದಾಗಿ ಈರುಳ್ಳಿ ಕೃಷಿ ಹಾನಿಯಾಗುತ್ತಿದ್ದು, ಈರುಳ್ಳಿ ಬೆಲೆ ಇನ್ನೆರಡು ವಾರಗಳಲ್ಲಿ ಕುಸಿತ ಕಾಣಲಿದೆ ಎಂದು ಕೃಷಿ ಸಚಿವ ಶರದ್ ...
ನವದೆಹಲಿ: ಮಳೆಯಿಂದಾಗಿ ಈರುಳ್ಳಿ ಕೃಷಿ ಹಾನಿಯಾಗುತ್ತಿದ್ದು, ಈರುಳ್ಳಿ ಬೆಲೆ ಇನ್ನೆರಡು ವಾರಗಳಲ್ಲಿ ಕುಸಿತ ಕಾಣಲಿದೆ ಎಂದು ಕೃಷಿ ಸಚಿವ ಶರದ್ ಪವಾರ್ ಹೇಳಿದ್ದಾರೆ.
ಮಳೆಯಿಂದಾಗಿ ಈರುಳ್ಳಿ ಬೆಳೆ ನಾಶವಾಗಿ ಕಷ್ಟ ಅನುಭವಿಸುತ್ತಿರುವ ಮಹಾರಾಷ್ಟ್ರದ ರೈತರಿಗೆ ಕೇಂದ್ರ ಸರ್ಕಾರ ರು.921.98 ಕೋಟಿ ಬಿಡುಗಡೆ ಮಾಡಲು ಯೋಚಿಸಿದೆ ಎಂದು ಪವಾರ್ ಹೇಳಿದ್ದಾರೆ.
ಶರದ್ ಪವಾರ್ ಅವರ ಮಾತಿಗೆ ವಾಣಿಜ್ಯ ಸಚಿವ ಆನಂದ್ ಶರ್ಮಾ ಕೂಡಾ ಬೆಂಬಲ ನೀಡಿದ್ದು, ಮುಂಬರುವ ವಾರಗಳಲ್ಲಿ ಈರುಳ್ಳಿ ಬೆಲೆ ಕುಸಿಯಲಿದೆ ಎಂದು ಹೇಳಿದ್ದಾರೆ.
ಈರುಳ್ಳಿ ಪೂರೈಕೆ ಕಡಿತಗೊಂಡ ಕಾರಣ ಕೆಲವು ಪ್ರಮುಖ ನಗರಗಳಲ್ಲಿ ಪ್ರಸ್ತುತ ವಾರ ಈರುಳ್ಳಿ ಬೆಲೆ ಕೆಜಿಗೆ ರು.100 ವರೆಗೂ ತಲುಪಿತ್ತು.