ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾಮನ್‌ವೇಲ್ತ್ ಸಭೆ ಬಹಿಷ್ಕರಿಸಿ: ತಮಿಳುನಾಡು ಸರ್ಕಾರ

Mainashree
Updated On : 24 Oct 2013, 4:02 am

ಚೆನ್ನೈ: ಕಾಮನ್‌ವೆಲ್ತ್ ಮುಖ್ಯಸ್ಥರ ಸಭೆಯನ್ನು (ಸಿಎಚ್‌ಓಜಿಎಂ) ಸಂಪೂರ್ಣವಾಗಿ ಬಹಿಷ್ಕರಿಸಿ ಎಂದು ಒತ್ತಡ ಹೇರಿರುವ ತಮಿಳುನಾಡು ಸರ್ಕಾರ, ಗುರುವಾರ ಈ ಸಂಬಂಧ ಮಸೂದೆ ಜಾರಿ ಮಾಡಿದೆ.

ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಲಿರುವ ಸಿಎಚ್‌ಓಜಿಎಂ ಸಭೆಯನ್ನು ಭಾರತ ಬಹಿಷ್ಕರಿಸಬೇಕು ಎಂದು ತಮಿಳನಾಡು ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿದೆ.

ಶ್ರೀಲಂಕಾದಲ್ಲಿ ತಮಿಳರಿಗೆ ಸಮಾನ ಹಕ್ಕು ನೀಡುವವರೆಗೂ, ಭಾರತ ಸಿಎಚ್‌ಓಜಿಎಂ ಸಭೆಯನ್ನು ಬಹಿಷ್ಕರಿಸಬೇಕು. ಈ ಸಂಬಂಧ ತಮಿಳುನಾಡಿನ ಸಚಿವ ಸಂಪುಟದಲ್ಲಿ ಸಿಎಚ್‌ಓಜಿಎಂ ಬಹಿಷ್ಕರಿಸಿ ಎಂಬ ಮಸೂದೆಯನ್ನು ಹೊರಡಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹೇಳಿದ್ದಾರೆ.

ನವೆಂಬರ್‌ನಲ್ಲಿ ಕೊಲಂಬೋದಲ್ಲಿ ಕಾಮನ್‌ವೇಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾಗವಹಿಸದಂತೆ ಮನವಿ ಮಾಡಿ ಜನಪರ ಸಂಘಟನೆಗಳು ಹೋರಾಟ ನಡೆಸಿದ್ದವು.

ಇದರ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಸಭೆಯನ್ನು ಬಹಿಷ್ಕರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಶ್ರೀಲಂಕಾದ ಸೇನೆ ಅಲ್ಲಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದೆ. ಅಲ್ಲಿನ ಪ್ರಜೆಗಳ ಸ್ಥಿತಿ ಶೋಚನೀಯವಾಗಿದೆ. ಸೇನೆಯಲ್ಲಿರುವ ಕೆಲವರು ಜನರು ಮಕ್ಕಳು ಮತ್ತು ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ತಮಿಳರಿಗೆ ಹಿಂಸೆ ನೀಡಲಾಗುತ್ತಿದೆ ಎಂದು ಜಯಾ ಹೇಳಿದ್ದಾರೆ.

ಈ ಸಭೆಯಲ್ಲಿ ಪ್ರಧಾನಿ ಅವರು ಭಾಗವಹಿಸಿದರೆ ತಮಿಳನಾಡು ಜನತೆಯನ್ನು ನಿರಾಶೆಗೊಳಿಸಿದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement