ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಾರದರ್ಶಕ ಆಡಳಿತ ಕೊಟ್ಟಿದ್ದೇವೆ: ಜೈರಾಮ್ ರಮೇಶ್

ಕೇಂದ್ರ ಸರ್ಕಾರ ಹಲವು ಮಹತ್ವದ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಪಾರದರ್ಶಕ ಆಡಳಿತ ಕೊಟ್ಟಿದೆ ಎಂದು ಕೇಂದ್ರ..

Lingaraj Badiger
Updated On : 24 Oct 2013, 2:06 am

ಬೆಂಗಳೂರು: ಕೇಂದ್ರ ಸರ್ಕಾರ ಹಲವು ಮಹತ್ವದ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಪಾರದರ್ಶಕ ಆಡಳಿತ ಕೊಟ್ಟಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಅವರು ಗುರುವಾರ ಹೇಳಿದ್ದಾರೆ.

ಇಂದು ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ರಮೇಶ್, ಆರ್‌ಟಿಐ ಮಸೂದೆ, ಬುಡಕಟ್ಟು ಮಸೂದೆ, ಆಹಾರ ಭದ್ರತಾ ಮಸೂದೆ ಹಾಗೂ ಭೂ ಸ್ವಾಧೀನ ಮಸೂದೆಗಳನ್ನು ಜಾರಿಗೆ ತಂದಿದ್ದೇವೆ ಎಂದರು.

ಆಹಾರ ಭದ್ರತಾ ಮಸೂದೆಯಿಂದ ರಾಜ್ಯಕ್ಕೆ ಹೆಚ್ಚು ಆಹಾರ ದೊರೆಯಲಿದೆ. ಇದರಿಂದ ಶೇ.76ರಷ್ಟು ಗ್ರಾಮೀಣ ಜನರಿಗೆ ಮತ್ತು ಶೇ.46ರಷ್ಟು ನಗರದ ಜನತೆಗೆ ಅನುಕೂಲವಾಗಲಿದೆ ಎಂದರು. ಅಲ್ಲದೆ ಭೂ ಸ್ವಾಧೀನ ಕಾಯ್ದೆಯೂ ಅತ್ಯಂತ ಮಹತ್ವದ್ದಾಗಿದ್ದು, ರೈತರ ಜಮೀನಿಗೆ ಸರಿಯಾದ ಬೆಲೆ ಸಿಗಲಿದೆ ಎಂದು ಜೈರಾಮ್ ರಮೇಶ್ ಹೇಳಿದರು.

ಇನ್ನು ಇಲ್ಲಿನ ಅಗತ್ಯಕ್ಕೆ ತಕ್ಕಂತೆ ರಾಜ್ಯದಲ್ಲೂ ಭೂ ಸ್ವಾಧೀನ ಕಾನೂನು ಜಾರಿಗೆ ತರಬಹುದು. ಇದರಿಂದ ಜಮೀನು ಕಳೆದುಕೊಳ್ಳುವ ರೈತರಿಗೆ ನ್ಯಾಯ ಸಿಗಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement