ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಜೆಪಿ ಕೈಗಾರಿಕೋದ್ಯಮಗಳ ರಾಜಕೀಯ ನಡೆಸುತ್ತಿದೆ: ರಾಹುಲ್

Mainashree
Updated On : 24 Oct 2013, 6:07 am

ಸಾಗರ್: ಭಾರತೀಯ ಜನತಾ ಪಕ್ಷ ಕೈಗಾರಿಕೋದ್ಯಮಿಗಳಿಗೆ ಹಾಗೂ ಹವಾ ನಿಯಂತ್ರಣ ಕೊಠಡಿಯಲ್ಲಿರುವವರಿಗಾಗಿ ರಾಜಕೀಯ ನಡೆಸುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಗುರುವಾರವು ಬಿಜೆಪಿ ವಿರುದ್ಧ ಭಾಷಣ ಮುಂದುವರೆಸಿರುವ ರಾಹುಲ್, ಬಿಜೆಪಿ ಬಡವರಿಗಾಗಿ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಮಧ್ಯಪ್ರದೇಶದಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿರುವ ರಾಹುಲ್ ಗಾಂಧಿ ಇಂದು ಬುಂದೆಲ್‌ಖಂಡ್ ಹಿಂದುಳಿದ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದರು.

ಬಡವರಿಗಾಗಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಆಹಾರ ಮಸೂದೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಇದಕ್ಕೆ ನಿಧಿ ಎಲ್ಲಿಂದ ತರುವುದು ಎಂದು. ಹೀಗೆ ಬಡವರಿಗಾಗಿ ಮಾಡಬೇಕಾದ ಕಾಯ್ದೆಗಳಿಗೆ ಬಿಜೆಪಿ ಅಡ್ಡಿಪಡಿಸುತ್ತಾ ಬರುತ್ತಿದೆ.

ಇದು ಕೇವಲ ಕೈಗಾರಿಕೋದ್ಯಮಿಗಳಿಗೆ ಹಾಗೂ ಹವಾನಿಯಂತ್ರಣದಲ್ಲಿರುವವರಿಗೆ ಕೆಲಸ ಮಾಡುವಂತಹ ಪಕ್ಷವಾಗಿದೆ ಎಂದು ರಾಹುಲ್ ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement