ಅತ್ಯಾಚಾರ ಪ್ರಕರಣ: ರಾಜಸ್ಥಾನದ ಮಾಜಿ ಸಚಿವ ಬಂಧನ
ಜೈಪುರ್: ಮಹಿಳೆಯನ್ನು ಅತ್ಯಾಚಾರವೆಸಗಿರುವ ಆರೋಪದ ಮೇಲೆ ರಾಜಸ್ಥಾನದ ಮಾಜಿ ಸಚಿವ ಬಾಬುಲಾಲ್ ನಾಗರ್ ಅವರನ್ನು ಕೇಂದ್ರ ತನಿಖಾ ತಂಡ(ಸಿಬಿಐ) ಶುಕ್ರವಾರ ಬಂಧಿಸಿದೆ.
35 ವರ್ಷದ ಮಹಿಳೆಯನ್ನು ಅತ್ಯಾಚಾರವೆಸಗಿ, ಮಹಿಳೆ ಮೇಲೆ ಹಲ್ಲೇ ನಡೆಸಿದ್ದಾರೆಂದು ಸೆಪ್ಟೆಂಬರ್ 11ರಂದು ಸೊಡಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೆಲಸ ಕೊಡಿಸುತ್ತೇನೆಂದು ಹೇಳಿ ತನ್ನ ಬಂಗಲೆಗೆ ಕರೆದ ಬಾಬುಲಾಲ್, ಅತ್ಯಾಚಾರ ನಡೆಸಿ, ಹಲ್ಲೇ ನಡೆಸಿದ್ದಾರೆ ಎಂದು ದೂರಲಾಗಿತ್ತು.
ಪ್ರಕರಣ ಸಂಬಂಧ ತನಿಖೆ ಕೈಗೊಂಡಿರುವ ಸಿಬಿಐ, ಬಾಬುಲಾಲ್ ಅವರನ್ನು ಬಂಧಿಸಿದ್ದಾರೆ.