ಕುರುಬರಿಗೂ ವೈಷ್ಣವ ದೀಕ್ಷೆ ನೀಡಲು ಸಿದ್ಧ: ಪೇಜಾವರ ಶ್ರೀ
ತಾವು ಕುರುಬರಿಗೂ ವೈಷ್ಣವ ದೀಕ್ಷೆ ನೀಡಲು ಸಿದ್ಧ ಎಂದು ಶುಕ್ರವಾರ ಪೇಜಾವರ ಶ್ರೀಗಳು ಹೇಳಿದ್ದಾರೆ.
ಬಾಗಲಕೋಟೆ: ತಾವು ಕುರುಬರಿಗೂ ವೈಷ್ಣವ ದೀಕ್ಷೆ ನೀಡಲು ಸಿದ್ಧ ಎಂದು ಶುಕ್ರವಾರ ಪೇಜಾವರ ಶ್ರೀಗಳು ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಕುರುಬರು ಹಾಗೂ ಬ್ರಾಹ್ಮಣರನ್ನು ವಿಂಗಡಿಸಲು ಸಾಧ್ಯವಿಲ್ಲ. ಕನಕದಾಸರು ಕೃಷ್ಣನ ಭಕ್ತರಾಗಿದ್ದರು. ಅಲ್ಲದೆ ಅವರು ವೈಷ್ಣವ ಧರ್ಮ ಪಾಲಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಕನಕನ ಕಿಂಡಿ ಹಾಗೂ ನವಗ್ರಹ ಕಿಂಡೆ ಬೇರೆ ಬೇರೆಯಲ್ಲ. ಈ ಕುರಿತು ಕೆಲವು ಬುದ್ದಿಜೀವಿಗಳು ಇಲ್ಲಸಲ್ಲದ ಹುನ್ನಾರ ನುಡೆಸುತ್ತಿದ್ದಾರೆ ಎಂದು ಆರೋಪಿಸಿದ ಪೇಜಾವರ ಶ್ರೀಗಳು, ಕುರುಬರು ವೈಷ್ಣವ ಧರ್ಮಕ್ಕೆ ಬಂದರೆ ಸ್ವಾಗತ, ಅವರಿಗೂ ತಾವು ವೈಷ್ಣವ ದೀಕ್ಷೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.