ಕೇಂದ್ರ, ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ನೋಟೀಸ್
ನವದೆಹಲಿ: ಭಾರತೀಯ ಮೀನುಗಾರರ ರಕ್ಷಣೆ ಸಂಬಂಧ ಕೇಂದ್ರ ಮತ್ತು ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟೀಸ್ ನೀಡಿದೆ.
ಶ್ರೀಲಂಕಾ ನೌಕಾಪಡೆ ವಶಪಡಿಸಿಕೊಂಡಿರುವ ಭಾರತೀಯ ಮೀನುಗಾರರ ಭದ್ರತಾ ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಮೂರ್ತಿಗಳಾದ ಪಿ.ಸತಾಶಿವಂ ಮತ್ತು ರಂಜನ್ ಗೊಗಯ್ ಅವರು ಕೇಂದ್ರ ಮತ್ತು ತಮಿಳುನಾಡು ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದ್ದಾರೆ.
ಭಾರತೀಯ ಮೀನುಗಾರರನ್ನು ವಶಪಡಿಸಿಕೊಂಡಿರುವುದಲ್ಲದೇ, ಅವರ ದೋಣಿಗಳನ್ನು ಧ್ವಂಸಗೊಳಿಸಿದ್ದಾರೆ. ಇದರ ಬಗ್ಗೆ ಯಾವ ಸರ್ಕಾರಗಳು ಕ್ರಮಕೈಗೊಳ್ಳದಿರುವುದು ವಿಷಾಧನೀಯ ಎಂದು ನ್ಯಾಯಪೀಠ ಹೇಳಿದೆ.
ಮೀನುಗಾರರ ರಕ್ಷಣೆ ಸಂಬಂಧ ಎಲ್ಲಾ ತಮಿಳು ಸಂಸದರು ಒಂದಾಗಿ ಒಂದೇ ನಿಲುವು ತಾಳಿರುವುದು ಸಂತಸ ತಂದಿದೆ ಎಂದು ರಾಜನ್ ಗೋಗಯ್ ತಿಳಿಸಿದ್ದಾರೆ.