ಚಲನಚಿತ್ರ ಪ್ರಶಸ್ತಿ ಪ್ರಕಟ: 'ಮಾಗಿಯ ಕಾಲ' ಅತ್ಯುತ್ತಮ ಚಿತ್ರ
2010 - 11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ಕೆ.ಶಿವರುದ್ರಯ್ಯ ನಿರ್ದೇಶನದ 'ಮಾಗಿಯ ಕಾಲ' ಅತ್ಯುತ್ತಮ ಚಿತ್ರ..
ಬೆಂಗಳೂರು: 2010 - 11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ಕೆ.ಶಿವರುದ್ರಯ್ಯ ನಿರ್ದೇಶನದ 'ಮಾಗಿಯ ಕಾಲ' ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
ಇನ್ನು ಅಗ್ನಿ ಶ್ರೀಧರ್ ನಿರ್ದೇಶನದ 'ತಮಸ್ಸು' ಅತ್ಯುತ್ತಮ ದ್ವಿತೀಯ ಚಿತ್ರ ಹಾಗೂ ಕೂಡ್ಲು ರಾಮಕೃಷ್ಣ ನಿರ್ದೇಶನದ 'ಮಾನಸ' ಅತ್ಯುತ್ತಮ ತೃತೀಯ ಚಿತ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿವೆ.
ಜಾಕಿ ಚಿತ್ರದ ಅಭಿನಯಕ್ಕಾಗಿ ನಟ ಪುನೀತ್ ರಾಜ್‌ಕುಮಾರ್ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರೆ, ಸಂಜು ವೆಡ್ಸ್ ಗೀತಾ ಚಿತ್ರದ ಅಭಿನಯಕ್ಕಾಗಿ ನಟಿ ಹಾಗೂ ಸಂಸದೆ ರಮ್ಯಾ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಪ್ರಶಸ್ತಿಯ ವಿವರ:
ಅತ್ಯುತ್ತಮ ಚಿತ್ರ - ಮಾಗಿಯ ಕಾಲ, ನಿರ್ದೇಶಕ ಕೆ.ಶಿವರುದ್ರಯ್ಯ
ಅತ್ಯುತ್ತಮ ದ್ವಿತೀಯ ಚಿತ್ರ- ತಮಸ್ಸು, ನಿರ್ದೇಶಕ ಅಗ್ನಿ ಶ್ರೀಧರ್
ಅತ್ಯುತ್ತಮ ತೃತೀಯ ಚಿತ್ರ - ಮಾನಸ, ನಿರ್ದೇಶಕ ಕೂಡ್ಲು ರಾಮಕೃಷ್ಣ
ಅತ್ಯುತ್ತಮ ಮಕ್ಕಳ ಚಿತ್ರ- ಒಂದೂರಲ್ಲಿ
ಅತ್ಯುತ್ತಮ ಸಾಮಾಜಿಕ ಚಿತ್ರ - ಬ್ಯಾರಿ
ಅತ್ಯುತ್ತಮ ಪ್ರಾದೇಶಿಕ ಚಿತ್ರ- ನಾಪುಟ್ಟ ಮಣ್ಣ್
ಅತ್ಯುತ್ತಮ ಪೋಷಕ ನಟ- ಅಚ್ಯುತ ಕುಮಾರ್
ಅತ್ಯುತ್ತಮ ಪೋಷಕ ನಟಿ- ಹರ್ಷಿಕಾ ಪೂಣಚ್ಚ, ತಮಸ್ಸು
ಅತ್ಯುತ್ತಮ ಗೀತ ರಚನೆಕಾರ- ಎ.ಬಂಗಾರ
ಅತ್ಯುತ್ತಮ ಹಿನ್ನೆಲೆ ಗಾಯಕ- ರವೀಂದ್ರ
ಅತ್ಯುತ್ತಮ ಹಿನ್ನೆಲೆ ಗಾಯಕಿ- ರಕ್ಷಾ ಪ್ರಿಯರಾಂ
ಅತ್ಯುತ್ತಮ ಚಿತ್ರಕತೆ - ಅಗ್ನಿ ಶ್ರೀಧರ, ತಮಸ್ಸು
ರಾಜ್‌ಕುಮಾರ್ ಪ್ರಶಸ್ತಿ- ಶಿವರಾಂ
ಡಾ.ವಿಷ್ಣುವರ್ಧನ್ ಪ್ರಶಸ್ತಿ- ನಟ ಹಾಗೂ ವಸತಿ ಸಚಿವ ಅಂಬರೀಷ್
ಅತ್ಯುತ್ತಮ ಸಂಭಾಷಣಾಕಾರ- ಲಕ್ಷ್ಮೀಪತಿ ಕೋಲಾರ
ಜೀವಮಾನ ಸಾಧನೆ- ನಿರ್ದೇಶಕ ಭಾರ್ಗವಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
ಅತ್ಯುತ್ತಮ ಕಥೆ ಬರಹಗಾರ - ಈಶ್ವರಚಂದ್ರ, ಮಾಗಿಯ ಕಾಲ
ಉಪೇಂದ್ರ ಅಭಿನಯದ ಸೂಪರ್ ಚಿತ್ರಕ್ಕೆ ವಿಶೇಷ ಪ್ರಶಸ್ತಿ