ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಐಎಲ್‌ಗೆ ವಂಚನೆ: 'ಕಿಂಗ್‌' ವಿರುದ್ಧ ಕೇಸ್

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಲ್)ಕ್ಕೆ ವಂಚನೆ ಮಾಡಿದ ಆರೋಪದ ಮೇಲೆ ವಿಜಯ್ ಮಲ್ಯ ..

Lingaraj Badiger
Updated On : 25 Oct 2013, 12:46 pm

ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಲ್)ಕ್ಕೆ ವಂಚನೆ ಮಾಡಿದ ಆರೋಪದ ಮೇಲೆ ವಿಜಯ್ ಮಲ್ಯ ಅವರ ಕಿಂಗ್‌ಫಿಷರ್ ಏರ್‌ಲೈನ್ಸ್ ವಿರುದ್ಧ ಬೆಂಗಳೂರು ಏರ್‌ಪೋರ್ಟ್ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದಾರೆ.

ಬಿಐಎಲ್ ವಿಜಯ್ ಮಲ್ಯ ಅವರ ಕಿಂಗ್‌ಫಿಷರ್ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಲಯದಲ್ಲಿ ಖಾಸಗಿ ದೂರು ದಾಖಲಿಸಿತ್ತು. ವಿಚಾರಣೆ ನಡೆಸಿದ ಕೋರ್ಟ್, ತನಿಖೆಗೆ ಆದೇಶಿಸಿತ್ತು.

ಬಳಕೆದಾರರ ಶುಲ್ಕ ಹಾಗೂ ಪ್ರಯಾಣಿಕರ ಸೇವಾ ಶುಲ್ಕ ಪಾವತಿಸದ ಆರೋಪದಡಿ, ಕಿಂಗ್‌ಫಿಷರ್‌ನ ಸಂಜಯ್ ಅಗರ್‌ವಾಲ್, ರಘುನಾಥನ್ ಹಾಗೂ ಭರತ್ ರಾಘವನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬಳಕೆದಾರರ ಶುಲ್ಕ ಹಾಗೂ ಪ್ರಯಾಣಿಕರ ಸೇವಾ ಶುಲ್ಕ ಪಾವತಿಸದ  ಹಿನ್ನೆಲೆಯಲ್ಲಿ ಅಕ್ಟೋಬರ್ 21ರಂದು ನಾವು ದೂರು ದಾಖಲಿಸಿದ್ದೇವು ಎಂದು ಬಿಐಎಲ್ ವಕ್ತಾರರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಆದರೆ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement