ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮನ್ನಾ ಡೇ ಮನೆಗೆ ಸಿಎಂ ಭೇಟಿ, ಸಾಂತ್ವನ

ನಿನ್ನೆ ನಿಧನರಾದ ಖ್ಯಾತ ಹಿನ್ನೆಲೆ ಗಾಯಕ ಮನ್ನಾ ಡೇ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...

Lingaraj Badiger
Updated On : 25 Oct 2013, 5:23 am

ಬೆಂಗಳೂರು: ನಿನ್ನೆ ನಿಧನರಾದ ಖ್ಯಾತ ಹಿನ್ನೆಲೆ ಗಾಯಕ ಮನ್ನಾ ಡೇ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಬಹುಭಾಷಾ ಹಾಡುಗಾರನಿಗೆ ಅಂತಿಮ ಗೌರವ ಸಲ್ಲಿಸುವುದನ್ನು ಸರ್ಕಾರ ಮರೆತಿದೆ ಎಂಬ ಟೀಕೆಗಳು ಬಂದ ಹಿನ್ನೆಲೆಯಲ್ಲಿ ಇಂದು ಸಿದ್ದರಾಮಯ್ಯ ಅವರು ಬಾಣಸವಾಡಿಯಲ್ಲಿರುವ ಮನ್ನಾ ಡೇ ಅವರ ನಿವಾಸಕ್ಕೆ ತೆರಳಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮನ್ನಾ ಡೇ ಅಂತ್ಯಕ್ರಿಯೆ ವೇಳೆ ಆದ ಅವ್ಯವಸ್ಥೆ ಬಗ್ಗೆ ಗೊತ್ತಾಗಲಿಲ್ಲ. ಕೊನೆ ಘಳಿಗೆಯಲ್ಲಿ ಅವ್ಯವಸ್ಥೆ ಬಗ್ಗೆ ಗಮನಕ್ಕೆ ಬಂತು. ಮೊದಲೇ ಗೊತ್ತಾಗಿದ್ದರೆ ವ್ಯವಸ್ಥೆ ಮಾಡಬಹುದಿತ್ತು ಎಂದು ಹೇಳಿದರು.

ಮನ್ನಾ ಡೇ ಅವರು ತಮ್ಮ ಗಾಯನದ ಮೂಲಕ ಸಹಸ್ರ ಸಹಸ್ರ ರಸಿಕರ ಹೃದಯದಲ್ಲಿ ನೆಲೆಸಿ ಖ್ಯಾತಿ ಹೊಂದಿದ್ದರಾದರೂ ಬೆಂಗಳೂರಿನಲ್ಲಿ ನಡೆದ ಅವರ ಅಂತ್ಯಕ್ರಿಯೆ ಮಾತ್ರ ಬೇಸರ ಮೂಡಿಸುವಂತದ್ದಾಗಿತ್ತು. ಅವರಿಗೆ ಅಂತಿಮ ಗೌರವ ಸಲ್ಲಿಸುವ ಕುರಿತು ಸರ್ಕಾರವೂ ಆಲೋಚಿಸಲಿಲ್ಲ. ಕನ್ನಡ ಚಿತ್ರೋದ್ಯಮದ ಗಣ್ಯರೂ ಆ ಕೆಲಸ ಮಾಡಲಿಲ್ಲ. ಮನ್ನಾ ಡೇ ಅವರ ಪಾರ್ಥಿವ ಶರೀರದ ಅಂತಿಮದರ್ಶನಕ್ಕೆ ಚಿತ್ರರಂಗದ ಬಹುತೇಕ ಮಂದಿ ಬರಲೇ ಇಲ್ಲ.

ಬೆರಳೆಣಿಕೆಯಷ್ಟು ಕಲಾವಿದರು ಮಾತ್ರ ಕಾಣಿಸಿಕೊಂಡರು. ಕೆಲವು ಕಿರಿಯ ಹಿಂದಿ ಗಾಯಕರು, ಕಿರುತೆರೆ ನಟ, ನಟಿಯರು, ಮನ್ನಾಡೆ ಗಾನ ಸುಧೆ ಕೇಳಿದ್ದ ಅಭಿಮಾನಿಗಳಷ್ಟೇ ನೆರೆದಿದ್ದರು.  ಉಳಿದಂತೆ ನಿರೀಕ್ಷೆಯಂತೆ ಸಿನಿಮಾ ಗಣ್ಯರು, ಕಲಾವಿದರು ಬರಲೇ ಇಲ್ಲ. ಹೀಗಾಗಿ ಮನ್ನಾಡೆ ಪಾರ್ಥಿವ ಶರೀರವನ್ನು ಬಹಳ ತರಾತುರಿಯಲ್ಲಿ ಅಂತ್ಯಕ್ರಿಯೆಗೆ ಕೊಂಡ್ಯೊಯ್ಯಲಾಯಿತು. ಹೆಬ್ಬಾಳದಲ್ಲಿರುವ ಬಿಬಿಎಂಪಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆಯೂ ನಡೆದು ಹೋಯಿತು. ಹೀಗಾಗಿ ಎಷ್ಟೋ ಅಭಿಮಾನಿಗಳಿಗೆ ಅಂತಿಮ ದರ್ಶವೂ ಸಿಗದಂತಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement