ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಾಹುಲ್‌ನಿಂದ ಸ್ಪಷ್ಟೀಕರಣ ಕೇಳಿದ ಮೋದಿ

ಸಂತ್ರಸ್ತರೊಂದಿಗೆ ಐಎಸ್‌ಐ ನಂಟು ಎಂದು ಹೇಳಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟೀಕರಣ ನೀಡಬೇಕು ಎಂದು ಗುಜರಾತ್...

Mainashree
Updated On : 25 Oct 2013, 5:33 am

ಬಂಡೆಲ್‌ಖಂಡ್: ಸಂತ್ರಸ್ತರೊಂದಿಗೆ ಐಎಸ್‌ಐ ನಂಟು ಎಂದು ಹೇಳಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟೀಕರಣ ನೀಡಬೇಕು ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಶುಕ್ರವಾರ ಆಗ್ರಹಿಸಿದ್ದಾರೆ.

ಉತ್ತರಪ್ರದೇಶದ ಮುಜಾಫರ್‌ನಗರದ ಸಂತ್ರಸ್ತರ ಜೊತೆ ಪಾಕಿಸ್ತಾನದ ಐಎಸ್‌ಐ ಏಜೆಂಟರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿರುವ ರಾಹುಲ್ ಸ್ಪಷ್ಟೀಕರಣ ನೀಡಲಿ ಎಂದು ಮೋದಿ ಬಹಿರಂಗವಾಗಿ ಸವಾಲು ಹಾಕಿದ್ದಾರೆ.

ಭಾರತೀಯ ಜನತಾ ಪಕ್ಷದ ನಾಯಕರು ಮುಜಾಫರ್‌ನಗರ್, ಕಾಶ್ಮೀರ ಮತ್ತು ಗುಜರಾತ್‌ಗೆ ತೆರಳಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದರು. ಇದರಿಂದಾಗಿ ಪಾಕ್‌ನ ಐಎಸ್‌ಐ ಏಜೆಂಟುಗಳು ಸಂತ್ರಸ್ತರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ರಾಹುಲ್ ಹೇಳಿಕೆ ನೀಡಿದ್ದರು.

ಇಂದು ಉತ್ತರಪ್ರದೇಶದ ಬಂಡೆಲ್‌ಖಂಡ್ ತೆರಳಿರುವ ಮೋದಿ, ರಾಹುಲ್ ಹೇಳಿಕೆಗೆ ಕಿಡಿ ಕಾರಿದ್ದು, ಕೂಡಲೇ ರಾಹುಲ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಐಎಸ್‌ಐ ಸಂಪರ್ಕವಿರುವ ವ್ಯಕ್ತಿಯ ಹೆಸರನ್ನು ಹೇಳಿ, ಇಲ್ಲದಿದ್ದರೆ ಕ್ಷಮೆಯಾಚಿಸಿ ಎಂದು ರಾಹುಲ್‌ಗೆ ಮೋದಿ ಸವಾಲು ಹಾಕಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಡೆಲ್‌ಖಂಡ್ ವಲಯವನ್ನು ಪೂರ್ಣವಾಗಿ ಬದಲಾಯಿಸಲಿದೆ. ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಮೋದಿ ಅಲ್ಲಿನ ಜನತೆಗೆ ಭರವಸೆ ನೀಡಿದ್ದಾರೆ.

ಯುಪಿಎ ಸರ್ಕಾರ ಬಂಡೆಲ್‌ಖಂಡ್ ವಲಯವನ್ನು ನಿರ್ಲಕ್ಷಿಸಿದೆ. ಇಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇಲ್ಲ. ಜಾನ್ಸಿ ರಾಣಿ ಮತ್ತು ಹಾಕಿ ಆಟಗಾರ ದ್ಯಾನಚಂದ್‌ರಂತವರನ್ನು ಭಾರತಕ್ಕೆ ಕೊಡುಗೆಯನ್ನಾಗಿ ನೀಡಿರುವಂತಹ ವಲಯ. ಇದರ ಅಭಿವೃದ್ಧಿ ಬಹಳ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ನಾನು ಇಲ್ಲಿ ಬಂದಿರುವುದೇ ನಿಮ್ಮಲ್ಲೆರ ಕಣ್ಣೀರು ಒರೆಸಲು, ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಈ ವಲಯದ ಎಲ್ಲಾ ಸಮಸ್ಯೆಯನ್ನು ಬಗೆಹರಿಸಲಿದೆ ಎಂದು ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement