ಸಾಮಾಜಿಕ ಜಾಲತಾಣಗಳಲ್ಲಿ ಚು.ಆಯೋಗದ ಮಾರ್ಗದರ್ಶನ
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ರಾಜಕೀಯ ಪಕ್ಷಗಳು ಪಾಲಿಸಬೇಕಾದ ಮಾರ್ಗದರ್ಶನ ಸೂಚನೆಯನ್ನು ಚುನಾವಣಾ ಆಯೋಗ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿದೆ.
ವಿಕಿಪೀಡಿಯಾ, ಟ್ವಿಟರ್, ಫೇಸ್ಬುಕ್ ಮತ್ತು ಯ್ಯೂಟೂಬ್ನಲ್ಲಿ ರಾಜಕೀಯ ಪಕ್ಷಗಳು ಪಾಲಿಸಬೇಕಾದಂತಹ ಸಲಹಾ ಸೂಚನೆಗಳನ್ನು ಚುನಾವಣೆ ಆಯೋಗ ಬಿತ್ತರಿಸಿದೆ.
ಅಭ್ಯರ್ಥಿಯು ಸಾಮಾಜಿಕ ಜಾಲತಾಣದಲ್ಲಿರುವ ತನ್ನ ಖಾತೆ ಬಗ್ಗೆ ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಬೇಕು ಹಾಗೂ ಪಕ್ಷಗಳು ಪ್ರಚಾರಕ್ಕಾಗಿ ಜಾಹಿರಾತು ಮಾಡಲು, ಆಯೋಗದಿಂದ ಪ್ರಮಾಣ ಪತ್ರ ಸ್ವಿಕರಿಸಿ ನಂತರ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಬೇಕು ಎಂದು ಆಯೋಗ ಹೇಳಿದೆ.
ಪ್ರಮಾಣ ಪತ್ರವಿಲ್ಲದೇ ಯಾವುದೇ ಅಭ್ಯರ್ಥಿಯು ಪಕ್ಷದ ಪ್ರಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡಬಾರುದು ಎಂದು ಸೂಚಿಸಿದೆ.
ಚುನಾವಣೆ ಪ್ರಚಾರಕ್ಕಾಗಿ ಮಾಡುವಂತಹ ವೆಚ್ಚದ ಬಗ್ಗೆ ರಾಜಕೀಯ ಪಕ್ಷಗಳು ಯಾವುದೇ ಜಾಹಿರಾತು ಮುಖಾಂತರ ಜಾಲತಾಣಗಳಲ್ಲಿ ಪ್ರಕಟಿಸಿಬಹುದು ಎಂದು ಹೇಳಿದೆ.