ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

26/11: ಮತ್ತೆ ಸಾಕ್ಷ್ಯ ಕೇಳಿದ ಪಾಕ್ ಗೆ ಭಾರತ ತಿರುಗೇಟು

26/11ರ ಮುಂಬೈ ದಾಳಿ ಸಂಬಂಧ ಮತ್ತೆ ಸಾಕ್ಷ್ಯಗಳನ್ನು ಕೇಳಿದ ಪಾಕಿಸ್ತಾನಕ್ಕೆ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ...

Mainashree
Updated On : 26 Oct 2013, 6:06 am

ನವದೆಹಲಿ: 26/11ರ ಮುಂಬೈ ದಾಳಿ ಸಂಬಂಧ ಮತ್ತೆ ಸಾಕ್ಷ್ಯಗಳನ್ನು ಕೇಳಿದ ಪಾಕಿಸ್ತಾನಕ್ಕೆ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ, ಶೇ. 99ರಷ್ಟು ದಾಖಲೆಗಳು ಪಾಕಿಸ್ತಾನದ ಬಳಿ ಇದ್ದು, ಸಾಕ್ಷಾಧಾರಗಳನ್ನು ಪಾಕಿಸ್ತಾನವೇ ಹಾಜರು ಪಡಿಸಬೇಕು ಎಂದು ಹೇಳಿದೆ.

26/11ರ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಸಾಕ್ಷಾಧಾರಗಳು ನೀಡಿ ಎಂದು ಪಾಕಿಸ್ತಾನದ ವಿದೇಶಾಂಗ ಕಾರ್ಯಾಲಯ ನೀಡಿದ ಪ್ರಕಟಣೆಗೆ ಪ್ರತಿಕ್ರಿಯೆ ನೀಡಿರುವ ಭಾರತ, ಪಾಕಿಸ್ತಾನದ ಬಳಿ ಶೇ.99ರಷ್ಟು ಸಾಕ್ಷ್ಯಾಧಾರಗಳು ಇವೆ. ನಮ್ಮನ್ನು ಮತ್ತಷ್ಟು ಸಾಕ್ಷ್ಯಾಧಾರಗಳನ್ನು ನೀಡಿ ಎಂದು ಕೇಳುವ ಬದಲು, ತಾವೆ ಸಾಕ್ಷ್ಯಾಧಾರಗಳನ್ನು ಹಾಜರು ಪಡಿಸಿ ಎಂದು ಹೇಳಿದೆ.

ಮುಂಬೈ ದಾಳಿ ಕುರಿತು ಪಾಕ್ನಲ್ಲಿ ಒಳಸಂಚು ಮಾಡಲಾಗಿತ್ತು. ಯಾವ ರೀತಿ ದಾಳಿ ಮಾಡಬೇಕೆಂಬುದರ ಬಗ್ಗೆ ಪಾಕ್ನಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡಲಾಗಿತ್ತು. ಈ ಕೃತ್ಯಕ್ಕೆ ಪಾಕಿಸ್ತಾನದಿಂದಲೇ ಹಣ ಸಹಾಯ ಮಾಡಲಾಗಿದೆ. ಹೀಗಿರಬೇಕಾದರೆ, ನಮ್ಮ ಬಳಿ ಮತ್ತಷ್ಟು ಸಾಕ್ಷ್ಯಾಧಾರಗಳನ್ನು ಕೇಳುವ ಬದಲು ತಮ್ಮ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಹಾಜರು ಪಡಿಸಿ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಹೇಳಿದ್ದಾರೆ.

ಪ್ರಕರಣ ಸಂಬಂಧಿಸಿದಂತೆ ಪಾಕ್ ನ್ಯಾಯಾಂಗದ ಆಯೋಗಕ್ಕೆ ಭಾರತ ಪೂರ್ಣ ಸಹಕಾರ ನೀಡಿದೆ. ಹೆಚ್ಚಿನ ವಿಚಾರಣೆಗಾಗಿ ಆಯೋಗ ಭಾರತಕ್ಕೆ ಬಂದಾಗ, ಎಲ್ಲಾ ರೀತಿಯ ಮಾಹಿತಿಯನ್ನು ನೀಡಲಾಗಿದ್ದು, ಬೇಕಾದಂತಹ ಸಾಕ್ಷ್ಯಾಧಾರಗಳನ್ನು ಅಕ್ಟೋಬರ್ ತಿಂಗಳಲ್ಲಿ ಪಾಕಿಸ್ತಾನದ ಉನ್ನತ ಆಯೋಗಕ್ಕೆ ಒಪ್ಪಿಸಲಾಗಿದೆ. ಹಾಗಾಗಿ ಸಾಕ್ಷ್ಯಾಧಾರಗಳನ್ನು ಹಾಜರುಪಡಿಸುವ ಹೊಣೆಗಾರಿಕೆ ಪಾಕ್ ಮೇಲಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement