ಅಸಾರಾಂ ನ್ಯಾಯಾಂಗ ಬಂಧನ ವಿಸ್ತರಣೆ
ಜೈಪುರ್: ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಧಾರ್ಮಿಕ ಗುರು ಅಸಾರಾಂ ಬಾಪು ಅವರ ನ್ಯಾಯಾಂಗ ಬಂಧನ ಅವಧಿಯನ್ನು ನವೆಂಬರ್ 6ರವರೆಗೆ ವಿಸ್ತರಿಸಲಾಗಿದೆ.
ಇಂದು ಅಸಾರಾಂ ಬಾಪು ವಿರುದ್ಧ ಜೋಧ್ಪುರ್ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಬೇಕಾಗಿತ್ತು. ಆದರೆ ಪೊಲೀಸರು ಚಾರ್ಚ್ಶೀಟ್ ಸಲ್ಲಿಸಲು ಸೆಷನ್ ನ್ಯಾಯಾಲಯದಲ್ಲಿ ಕಾಲವಕಾಶ ಕೇಳಿದ್ದರಿಂದ, ಅಸಾರಾಂ ಅವರ ಬಂಧನ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ಸಂಬಂಧ ನಿನ್ನೆ ಅಸಾರಾಂ ಅವರನ್ನು ಜೊಧ್ಪುರ್ ಸೆಷನ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಶನಿವಾರದವರೆಗೆ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಿತ್ತು.
ಅಸಾರಾಂ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಅಕ್ರಮ ಬಂಧನ ನೀಡಿದ ಆರೋಪದಡಿ ಚಾರ್ಜ್ಶೀಟ್ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಅಸಾರಾಂ ಪುತ್ರ ನಾರಾಯಣ ಸಾಯಿ ತಲೆಮರೆಸಿಕೊಂಡಿದ್ದು, ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ.