ಐಪಿಎಲ್ನಿಂದ ಪುಣೆ ವಾರಿಯರ್ಸ್ ವಜಾ
ಐಪಿಎಲ್ನ ಕಳೆದ ಎರಡು ಆವೃತ್ತಿಗಳಲ್ಲಿ ಭಾಗವಹಿಸಿದ್ದ ಸಹರಾ ಪುಣೆ ವಾರಿಯರ್ಸ್ ತಂಡ, ಪಂದ್ಯಾವಳಿಯಿಂದಲೇ ವಜಾಗೊಂಡಿದ್ದು,
ಚೆನ್ನೈ: ಐಪಿಎಲ್ನ ಕಳೆದ ಎರಡು ಆವೃತ್ತಿಗಳಲ್ಲಿ ಭಾಗವಹಿಸಿದ್ದ ಸಹರಾ ಪುಣೆ ವಾರಿಯರ್ಸ್ ತಂಡ, ಶನಿವಾರ ಪಂದ್ಯಾವಳಿಯಿಂದಲೇ ವಜಾಗೊಂಡಿದ್ದು, ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಕೇವಲ 8 ತಂಡಗಳು ಮಾತ್ರ ಭಾಗವಹಿಸಲಿವೆ.
ಸಹರಾ ಪುಣೆ ವಾರಿಯರ್ಸ್ ತಂಡ 170 ಕೋಟಿಯಷ್ಟು ವಾರ್ಷಿಕ ಬ್ಯಾಂಕ್ ಖಾತರಿ ಮೊತ್ತವನ್ನು ಪಾವತಿ ಮಾಡದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ), ಪುಣೆ ಫ್ರಾಂಚೈಸಿಯನ್ನು ಐಪಿಎಲ್ನಿಂದ ವಜಾಗೊಳಿಸಿದೆ.
ಇಂದು ಚೆನ್ನೈನಲ್ಲಿ ನಡೆದ ಕ್ರಿಕೆಟ್ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಬಿಸಿಸಿಐನ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ರಾಜಿಗೆ ಮುಂದಾಗಲು ಪುಣೆ ವಾರಿಯರ್ಸ್ ತಂಡ ಸಿದ್ಧವಾಗಿದ್ದರೂ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ. ಕಳೆದೆ ಮೇ ತಿಂಗಳಲ್ಲಿ ಬಿಸಿಸಿಐ ಪುಣೆ ತಂಡದ ಬ್ಯಾಂಕ್ ಖಾತರಿ ಮೊತ್ತವನ್ನು ಪಡೆದುಕೊಂಡ ನಂತರ ಪುಣೆ ತಂಡವನ್ನು ಐಪಿಎಲ್ನಿಂದ ಹೊರ ಹಾಕಲಾಗಿತ್ತು.