ಜಿ-ಕೆಟಗರಿ ಅಕ್ರಮ: ಸೈಟ್ ವಾಪಸ್ಗೆ ಶಿಫಾರಸು
ಜಿ-ಕೆಟಗರಿಯ 313 ನಿವೇಶನಗಳ ಹಂಚಿಕೆಯಲ್ಲಿ ನಡೆದ ಅಕ್ರಮ ಸಾಬೀತಾಗಿದ್ದು, ಸೈಟ್ಗಳನ್ನು ಬಿಡಿಎಗೆ ವಾಪಸ್ ಪಡೆದುಕೊಳ್ಳುವಂತೆ...
ಬೆಂಗಳೂರು: ಜಿ-ಕೆಟಗರಿಯ 313 ನಿವೇಶನಗಳ ಹಂಚಿಕೆಯಲ್ಲಿ ನಡೆದ ಅಕ್ರಮ ಸಾಬೀತಾಗಿದ್ದು, ಸೈಟ್ಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ವಾಪಸ್ ಪಡೆದುಕೊಳ್ಳುವಂತೆ ನಿವೃತ್ತ ನ್ಯಾಯಮೂರ್ತಿ, ಪದ್ಮರಾಜ್ ನೇತೃತ್ವದ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ನಿವೇಶನ ಹಂಚಿಕೆ ಅಕ್ರಮದ ಬಗ್ಗೆ ತನಿಖೆ ನಡೆಸಿದ ನ್ಯಾ. ಪದ್ಮರಾಜ್, ನ್ಯಾ, ಎಚ್. ರಂಗವಿಠಲಾಚಾರ್ ಹಾಗೂ ಪಿ.ಬಿ.ಮಹಿಷಿ ಅವರನ್ನೊಳಗೊಂಡ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಮಾಜಿ ಮುಖ್ಯಮಂತ್ರಿಗಳಾದ ಎನ್.ಧರಂಸಿಂಗ್, ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಭಾರಿ ಅಕ್ರಮ ನಡೆದಿರುವುದು ಬಹಿರಂಗವಾಗಿದೆ.
ಸುಮಾರು 140 ಶಾಸಕರು, ನಾಲ್ವರು ಸಂಸದರು, 12 ಗೃಹಣಿಯರಿಗೆ, ಸ್ಟೆನೊಗ್ರಾಫರ್, ವೇಟರ್, ಶಾಸಕ, ಸಚಿವರ ಆಪ್ತರಿಗೆ ಹಾಗೂ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಪುತ್ರಿ ಸೇರಿದಂತೆ ಹಲವರಿಗೆ ಜಿ ಕೆಟಗರಿ ಸೈಟ್ ಮಂಜೂರು ಮಾಡಲಾಗಿತ್ತು.
ಜಿ-ಕೆಟಗರಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಎಸ್.ವಾಸುದೇವ್ ಎಂಬುವವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, 2012 ಆಗಸ್ಟ್ 25ರಂದು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿತ್ತು.
ಜಿ-ಕೆಟಗರಿ ನಿವೇಶನ ಪಡೆದ ಫಲಾನುಭವಿಗಳು
ಶ್ರೀನಿವಾಸ್, ಕಾರು ಚಾಲಕ
ನಾಗರಾಜ್ ಜಮಖಂಡಿ, ಮುರುಗೇಶ್ ನಿರಾಣಿ ಆಪ್ತ
ಎಂ.ಆರ್.ಜೆಟ್ಟೋಜಿರಾವ್, ಹೋಟೆಲ್ನಲ್ಲಿ ವೇಟರ್
ಬಿ.ಸಿ.ಭಾರತಿ, ಸರ್ಕಾರಿ ಸ್ಟೆನೊಗ್ರಾಫರ್
ಎನ್.ಆರ್.ಲೋಕೇಶ್, ಸರ್ಕಾರಿ ಗ್ರೂಪ್ ಡಿ.ನೌಕರ
ಎ.ಕೃಷ್ಣ, ಪೊಲೀಸ್ ಪೇದೆ
ಎಸ್.ಎಲ್.ಮಂಜು, ಸರ್ಕಾರಿ ಗುಮಾಸ್ತ
ಸುರೇಶ್, ಎಚ್.ಡಿ.ಕುಮಾರಸ್ವಾಮಿ ಆಪ್ತ ಸಹಾಯಕ
ಪಿ.ಎಂ.ಬಚ್ಚೇಗೌಡ, ಕಾರು ಚಾಲಕ
ಬಿ.ಬಿ.ವೀಣಾ, ಸರ್ಕಾರಿ ಟೈಪಿಸ್ಟ್
ನವಾಬ್ ಜಾನ್, ಗೆಸ್ಟ್ಹೌಸ್ ಮ್ಯಾನೇಜರ್
ಶಿವಮಾದು, ಟೈಪಿಸ್ಟ್, ಸಣ್ಣ ನೀರಾವರಿ ಇಲಾಖೆ
ಎಂ.ಜಯಮ್ಮ, ಬೆಂಗಳೂರಿನ ಮತ್ತಿಕೆರೆ ನಿವಾಸಿ
ಟಿ.ಕೆ.ಪಂಕಜಮ್, ಬೆಂಗಳೂರಿನ ಉದಯನಗರ ನಿವಾಸಿ
ಲಲಿತಾ, ಬೆಂಗಳೂರಿನ ಮಾರುತಿನಗರ ನಿವಾಸಿ
ಕೆ.ಸರಸ್ವತಿ, ಬೆಂಗಳೂರಿನ ಕಾವಲ್ ಭೈರಸಂದ್ರ ನಿವಾಸಿ
ಕೆ.ಮಂಜುಳಾ, ಬೆಂಗಳೂರಿನ ಗೊಟ್ಟಿಗೆರೆ ನಿವಾಸಿ
ಎಂ.ಕೆ.ಸುಧಾ, ಚನ್ನರಾಯಪಟ್ಟಣ ನಿವಾಸಿ
ಕೋಮಲಾ, ಬೆಂಗಳೂರಿನ ರಾಜ್ಮಹಲ್ ಗುಟ್ಟಹಳ್ಳಿ ನಿವಾಸಿ