ಭೂಗತ ಪಾತಕಿಗಳಿಂದ ಅಕ್ಷಯ್ ಕುಮಾರ್ಗೆ ಜೀವ ಬೆದರಿಕೆ
ಬಾಲಿವುಡ್ ಮೇಲೆ ಮತ್ತೆ ಭೂಗತ ಜಗತ್ತಿನ ಕಣ್ಣು ಬಿದ್ದಿದೆ. ಇತ್ತೀಚಗಷ್ಟೆ ಖ್ಯಾತ ಗಾಯಕ ಸೋನು ನಿಗಮ್ಗೆ ಜೀವ ..
ಮುಂಬೈ: ಬಾಲಿವುಡ್ ಮೇಲೆ ಮತ್ತೆ ಭೂಗತ ಜಗತ್ತಿನ ಕಣ್ಣು ಬಿದ್ದಿದೆ. ಇತ್ತೀಚಗಷ್ಟೆ ಖ್ಯಾತ ಗಾಯಕ ಸೋನು ನಿಗಮ್ಗೆ ಜೀವ ಬೆದರಿಕೆ ಹಾಕಿದ್ದ ಭೂಗತ ಪಾತಕಿಗಳು, ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ಗೆ ಬೆದರಿಕೆ ಹಾಕಿದ್ದಾರೆ.
ಭೂಗತ ಪಾತಕಿಗಳಿಂದ ತಮಗೆ ಜೀವ ಬೆದರಿಕೆ ಕರೆ ಬಂದಿದೆ ಎಂದು ಅಕ್ಷಯ್ ಕುಮಾರ್ ದೂರು ನೀಡಿದ್ದಾರೆ. ಈ ಸಂಬಂಧ ಅವರು ಅಕ್ಟೋಬರ್ 22ರಂದು ಜುಹು ಪೊಲೀಸ್ ಠಾಣೆಗೆ ಪತ್ರ ಬರೆದಿದ್ದು, ತಮಗೆ ಸೂಕ್ತ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ.
ಇತ್ತೀಚಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಚೋಟಾ ಶಕೀಲ್ ಸೋನು ನಿಗಮ್ಗೆ ಕರೆ ಮಾಡಿ, ಬೆದರಿಕೆ ಹಾಕಿದ್ದರು. ಅಲ್ಲದೆ ಕೆಲವು ತಿಂಗಳ ಹಿಂದೆ ನಿರ್ಮಾಪಕ ಬೋನಿ ಕಪೂರ್ ಹಾಗೂ ನಿರ್ದೇಶಕ ಕರಣ್ ಜೋಹರ್ ಸಹ ಭೂಗತ ಜಗತ್ತಿನಿಂದ ತಮಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪೊಲೀಸರಿಗೆ ದೂರು ನೀಡಿದ್ದರು.