ಮುಜಾಫರ್ನಗರ ಗಲಭೆಗೆ ಮುಲಾಯಂ-ಮೋದಿ ಕಾರಣ: ಬೇನಿ ವರ್ಮಾ
ನವದೆಹಲಿ/ಲಖನೌ: ಇತ್ತೀಚೆಗೆ ನಡೆದ ಮುಜಾಫರ್ನಗರದ ಗಲಭೆಗೆ ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅವರು ಕಾರಣ ಎಂದು ಕಾಂಗ್ರೆಸ್ ನಾಯಕ ಬೇನಿ ಪ್ರಸಾದ್ ಶನಿವಾರ ಹೇಳಿದ್ದಾರೆ.
ಮುಜಾಫರ್ನಗರದಲ್ಲಿ ಗಲಭೆಗೆ ಮೂಲ ಕಾರಣ ಮೋದಿ ಮತ್ತು ಮುಲಾಯಂ ಅವರು ಎಂದಿರುವು ವರ್ಮಾ, ಮತದಾರರನ್ನ ತಮ್ಮತ್ತ ಸೆಳೆಯಲು ಈ ಹುನ್ನಾರ ನಡೆಸಿದ್ದಾರೆಂದು ಆಪಾದಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಮತದಾರರನ್ನು ತಮ್ಮತ್ತ ಸೆಳೆಯಲು ಗಲಭೆಗೆ ಪ್ರಚೋದನೆ ನೀಡಿದ್ದಾರೆ. ಇದರಲ್ಲಿ ರಾಜಕೀಯ ದುರುದ್ದೇಶ ಅಡಗಿದೆ ಎಂದು ಅವರು ದೂರಿದ್ದಾರೆ.