ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳಿಂದ ಬಂದ್‌ಗೆ ಕರೆ
1947 ಅಕ್ಟೋಬರ್ 27ರಂದು ಭಾರತೀಯ ಸೇನಾ ಪಡೆಯನ್ನು ನೀಯೋಜಿಸಿದನ್ನು ವಿರೋಧಿಸಿ ಜಮ್ಮು ಮತ್ತು ಕಾಶ್ಮೀರ ಕಣಿವೆಯಾದ್ಯಂತ...
ಶ್ರೀನಗರ: 1947 ಅಕ್ಟೋಬರ್ 27ರಂದು ಭಾರತೀಯ ಸೇನಾ ಪಡೆಯನ್ನು ನೀಯೋಜಿಸಿದನ್ನು ವಿರೋಧಿಸಿ ಜಮ್ಮು ಮತ್ತು ಕಾಶ್ಮೀರ ಕಣಿವೆಯಾದ್ಯಂತ ಭಾನುವಾರ ಪ್ರತ್ಯೆಕವಾದಿಗಳು ಬಂದ್‌ಗೆ ಕರೆ ನೀಡಿದ್ದಾರೆ.
ಇದೆ ದಿನ 1947ರಲ್ಲಿ ಕಾಶ್ಮೀರದ ಕಣಿವೆ ಭಾರತಕ್ಕೆ ಸೇರ್ಪಡೆಗೊಂಡಾಗ, ನುಸುಳುತ್ತಿದ್ದ ಬುಡಕಟ್ಟು ಜನರನ್ನು ನಿಯಂತ್ರಿಸಲು ಭಾರತೀಯ ಸೇನಾಪಡೆಯನ್ನು ನಿಯೋಜಿಸಲಾಗಿತ್ತು. ಇದನ್ನು ವಿರೋಧಿಸಿ ಇಂದು ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳು ಬಂದ್‌ಗೆ ಕರೆ ನೀಡಲಾಗಿದೆ.
ಬಂದ್‌ಗೆ ಕರೆ ನೀಡಲಾಗಿದ್ದು, ಅಂಗಡಿ ಮುಂಗಟ್ಟುಗಳು ಕಾರ್ಯನಿರ್ವಹಿಸುತ್ತಿಲ್ಲ. ಸಾರಿಗೆ ಮತ್ತು ಖಾಸಗಿ ವಾಹನಗಳ ಒಡಾಟ ಸ್ಥಗಿತಗೊಂಡಿವೆ. ಹಿಜ್ ಮುಜಾಹಿದ್ದೀನ್ ಗೊರಿಲ್ಲಾ ಗುಂಪು, ಸೈಯ್‌ದ್ ಸಲಹುದ್ದೀನ್ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ.