ಮೋದಿ ಭೇಟಿಗೆ ಮುನ್ನ ಪಾಟ್ನಾ ರೈಲ್ವೇ ನಿಲ್ದಾಣದಲ್ಲಿ ಬಾಂಬ್ ಸ್ಫೋಟ: 5 ಸಾವು
ಬಿಜೆಪಿ ಪ್ರಧಾನಿ ಅಭ್ಯರ್ಥಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ 'ಹೂಂಕಾರ್' ರ್ಯಾಲಿಗೆ ಮುನ್ನ ಪಾಟ್ನಾ ರೈಲ್ವೇ..
ಪಾಟ್ನಾ: ಬಿಜೆಪಿ ಪ್ರಧಾನಿ ಅಭ್ಯರ್ಥಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ 'ಹೂಂಕಾರ್' ರ್ಯಾಲಿಗೆ ಮುನ್ನ ಪಾಟ್ನಾ ರೈಲ್ವೇ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ನಡೆದ ಘಟನೆ ವರದಿಯಾಗಿದೆ.
ಭಾನುವಾರ ಮೋದಿಯವರ ಬೃಹತ್ ರ್ಯಾಲಿ ನಡೆಯಲ್ಲಿದ್ದು, ಇದಕ್ಕೆ ಮುನ್ನ ಬಾಂಬ್ ಸ್ಫೋಟ ನಡೆದಿರುವುದು ಆತಂಕ ಸೃಷ್ಟಿಸಿದೆ.
ಸ್ಫೋಟದಲ್ಲಿ ಐವರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಬೆಳಿಗ್ಗೆ 10.30ಕ್ಕೆ ರೈಲ್ವೆ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದ ಬಳಿ 7 ಬಾಂಬ್ ಸ್ಫೋಟಗೊಂಡಿವೆ. ಇದಾದ 10 ನಿಮಿಷದ ಬಳಿಕ ಗಾಂಧಿ ಮೈದಾನದಲ್ಲಿ 6 ಬಾಂಬ್ಗಳು ಸ್ಫೋಟಗೊಂಡಿವೆ.
ಭದ್ರತಾ ಸಿಬ್ಬಂದಿಗಳ ಕೊರತೆಯಿಂದಾಗಿ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ಸಂಬಂಧಿಸಿದಂತೆ ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.